ರಾತ್ರಿ ವೇಳೆ ಒಂಟಿ ಮಹಿಳೆಯರಿದ್ದ ಮನೆಗಳಿಗೆ ನುಗ್ಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಯುವಕನನ್ನ್ನು ಗ್ರಾಮಸ್ಥರೇ ಹಿಡಿದು ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನ ಕೋಟೆ ತಾಂಡದಲ್ಲಿ ನಡೆದಿದೆ.ಕೋಟೆ ತಾಂಡದ ಸುಂದರ್ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ.
ಒಬ್ಬಂಟಿ ಮಹಿಳೆಯರಿರುವ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು:
ತಾಂಡದ ಮಹಿಳೆಯೋರ್ವರ ಪತಿ ನಾಲ್ಕು ದಿನದಿಂದ ಮನೆಯಲ್ಲಿಲ್ಲದಿರುವುದನ್ನು ಗಮನಿಸಿದ್ದ ಸುಂದರ್ ನಾಯ್ಕ, ನಿನ್ನೆ ರಾತ್ರಿ ಆ ಮನೆಗೆ ನುಗ್ಗಿದ್ದಾನೆ. ಮಹಿಳೆಯ ಮನೆಗೆ ನುಗ್ಗಿದ ಸುಂದರ್ ನಾಯ್ಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ನಿದ್ರೆಯಿಂದ ಎಚ್ಚರಗೊಂಡ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ.ಈ ವೇಳೆ ಪಕ್ಕದ ಕೋಣೆಯಲ್ಲಿದ್ದ ಮಲಗಿದ್ದ ಮಹಿಳೆಯ ಮಾವ ಎಚ್ಚರಗೊಂಡು ಸೊಸೆಯ ಕೋಣೆಗೆ ಹೋಗಿದ್ದಾನೆ. ಈ ವೇಳೆ ಸುಂದರ್ ನಾಯ್ಕ ಅಲ್ಲಿಂದ ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ವಿಷಯ ತಿಳಿದು ಗ್ರಾಮಸ್ಥರು ಸೆರೆ ಹಿಡಿದು ದೇವಸ್ಥಾನದ ಬಳಿ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸುಂದರ್ ನಾಯ್ಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಸುಂದರ್ನಾಯ್ಕ ಭಾಗಿಯಾಗಿದ್ದ ಎನ್ನಲಾಗಿದೆ.ಆದರೆ ಮರ್ಯಾದೆಗೆ ಅಂಜಿ ಯಾರೂ ಪ್ರಕರಣ ದಾಖಲಿಸಿರಲಿಲ್ಲ.ಈ ನಂಬಿಕೆಯ ಮೇಲೆ ಸುಂದರ್ ನಾಯಕ್ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ ಎನ್ನಲಾಗಿದೆ.
ಈ ಹಿಂದೆಯೂ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಸುಂದರ್ನಾಯ್ಕ ಭಾಗಿಯಾಗಿದ್ದ ಎನ್ನಲಾಗಿದೆ.ಆದರೆ ಮರ್ಯಾದೆಗೆ ಅಂಜಿ ಯಾರೂ ಪ್ರಕರಣ ದಾಖಲಿಸಿರಲಿಲ್ಲ.ಈ ನಂಬಿಕೆಯ ಮೇಲೆ ಸುಂದರ್ ನಾಯಕ್ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ ಎನ್ನಲಾಗಿದೆ.