ಸಾಗರ ತಾಲೂಕಿನ ಸುರುಗುಪ್ಪೆ ಕೆರೆ ಏರಿ ಮೇಲೆ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ .
ಸೊರಬ ತಾಲೂಕಿನ ಬಂದಿಗೆ ನಿವಾಸಿಗಳಾದ ನಾಗಪ್ಪ (42)ಹಾಗೂ ಅವರ ಪುತ್ರ ಲೋಹಿತ್(16) ಸಣ್ಣ ಮನೆ ಗ್ರಾಮದೇವತೆಯ ಜಾತ್ರೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಯಲಕುಂದ್ಲಿ ನಿವಾಸಿ ಕಿರಣ್(20) ಮನೆಗೆ ಹೋಗುವ ಸಂದರ್ಭದಲ್ಲಿ ಇಬ್ಬರ ದ್ವಿಚಕ್ರವಾಹನ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ನಾಗಪ್ಪ (42) ಸ್ಥಳದಲ್ಲೇ ಮೃತಪಟ್ಟಿದ್ದು ಲೋಹಿತ್(16) ಹಾಗೂ ಕಿರಣ್(20) ರವರ ಸ್ಥಿತಿ ಗಂಭೀರವಾಗಿದೆ ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತಪಟ್ಟ ವ್ಯಕ್ತಿಯ ಮೃತದೇಹ ಮರಣೋತ್ತರ ಪರೀಕ್ಷೆಗೆ ಸಾಗರ ಸರ್ಕಾರಿ ಆಸ್ಪತ್ರೆಯ ಶವಾಗಾರದಲಿ ಇರಿಸಲಾಗಿದೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.