ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರದ ಹೆಸರಾಂತ ದಂತ ವೈದ್ಯೆ ಸದಾ ಹಸನ್ಮುಖಿ ಶ್ರೀಮತಿ ವಿದ್ಯಾ ಪ್ರಕಾಶ್ ರವರು ಇಂದು ಸಂಜೆ ತಮ್ಮ ಸ್ವ ಗೃಹದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಇವರ ಸಾವಿಗೆ ಸಾಗರದ ಜನಪ್ರತಿನಿದಿಗಳು ಹಾಗೂ ಮಹಾ ಜನತೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಪಟ್ಟಣದ ಚಾಮರಾಜ ಪೇಟೆಯಲ್ಲಿ ನಗರಸಭೆ ಕಾಂಪ್ಲೆಕ್ಸ್ ಎದುರು ಪ್ರಕಾಶ್ ಕ್ಲಿನಿಕ್ ನಲ್ಲಿ ದಂತ ವೈದ್ಯೆಯಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.ಮೃತರ ಪತಿ ಪ್ರಕಾಶ್ ಕೂಡ ಇದೆ ಕ್ಲಿನಿಕ್ ನಲ್ಲಿ ಚರ್ಮ ವೈದ್ಯರಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ ಅವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಲ್ಲಿ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮಾಹಿತಿ ಕೃಪೆ : ಮಲೆನಾಡ ರಹಸ್ಯ
		 
                         
                         
                         
                         
                         
                         
                         
                         
                         
                        