ಜೀವರಕ್ಷಣೆಗೆ ಕಾರಣವಾಗುವ ರಕ್ತದಾನದಂತಹ ಮಹತ್ವದ ಕಾರ್ಯದಲ್ಲಿ ಭಾಗಿಯಾಗುವ ಸಾಮಾಜಿಕ ಕಾಳಜಿ ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಎಂದು ರೋಟರಿ ರಕ್ತನಿಧಿ ವೈದ್ಯಾಧಿಕಾರಿಗಳಾದ ಬಿ ಜಿ ಸಂಗಮ್ ಹೇಳಿದರು
ನಗರದ ಲಾಲ್ ಬಹದ್ದೂರ್ ಕಲಾ ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಮಹಾವಿದ್ಯಾಲಯ, ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಎನ್ಎಸ್ಎಸ್, ಎನ್ ಸಿಸಿ, ವಿದ್ಯಾರ್ಥಿ ವೇದಿಕೆ,ಕೆ ಎಚ್ ಶ್ರೀನಿವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ಜಿ.ಎ.ನಾರಿಬೋಲಿ ಮಹಾವಿದ್ಯಾಲಯ , ಲಯನ್ಸ್ ಕ್ಲಬ್ ಸಾಗರ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು…
ರಕ್ತ ಮನುಷ್ಯನಿಗೆ ಅತ್ಯಂತ ಅಗತ್ಯ ವಸ್ತು ಅಪಘಾತ ಹಾಗೂ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ರಕ್ತ ಸಿಗದೆ ಸಾಕಷ್ಟು ಜನ ಮೃತ ಪಡುತ್ತಿದ್ದಾರೆ ಇಂತಹ ಅಸಹಾಯಕರಿಗೆ ರಕ್ತ ಸಂಗ್ರಹಿಸಿ ಕೊಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸತೀಶ್ ಹೇಳಿದರು
ರಕ್ತದಾನದಿಂದ ಅದೆಷ್ಟೋ ಜೀವವನ್ನು ಉಳಿಸಬಹುದು ಸದೃಢ ವ್ಯಕ್ತಿ ರಕ್ತವನ್ನು ದಾನ ಮಾಡಿದರೆ ಅಷ್ಟೆ ಅಂಶದಷ್ಟು ಹೊಸರಕ್ತವು 2ತಿಂಗಳೊಳಗೆ ತುಂಬುವ ಮೂಲಕ ಇನ್ನಷ್ಟು ಚೈತನ್ಯ ಉತ್ಸಾಹ ಬರುತ್ತದೆ ಎಂದು ನಾಗರಾಜ್ ಹೇಳಿದರು
ಶಿಬಿರದಲ್ಲಿ 111 ಯೂನಿಟ್ ರಕ್ತ ಸಂಗ್ರಹವಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಲಕ್ಷ್ಮೀಶ ಎ.ಎಸ್. ಅಧ್ಯಕ್ಷತೆ ವಹಿಸಿದ್ದರು. ಮ.ಪ್ರ.ಅ.ದ ಸಹಾ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಬಿ ಎಂ, ಶ್ರೀ ಗಿರೀಶ್ ಕೋವಿ ಹಾಗೂ ನಿರ್ದೇಶಕರದ ಶ್ರೀ ಈಳಿ ಶ್ರೀಧರ, ಸ್ನಾತಕೋತ್ತರ ಪದವಿಯ ನಿರ್ದೇಶಕರಾದ ಡಾ. ಸುಮುಖ ಪಿ ಎಸ್ ,ಉಪನ್ಯಾಸಕರಾ ದಯಾನಂದ್ ಸಿ ನಾಯ್ಕ್, ನೂತನ್ ,ವಿನಾಯಕ್,ವಿಷ್ಣುಶರ್ಮ,ವಿನಯ್ ಉಪಸ್ಥಿತರಿದ್ದರು.
ವರದಿ : ಸೂರಜ್ ನಾಯರ್