ಗ್ರಾಮದ ಗಡಿಭಾಗದಲ್ಲಿ ರಂಗೋಲಿಹಿಟ್ಟಿನ ಗೊಂಬೆ, ಮೊಟ್ಟೆ, ಬಟ್ಟೆ, ಕೂದಲು, ನಿಂಬೆಹಣ್ಣು ಸೇರಿದಂತೆ ಮಾಟಕ್ಕೆ ಬಳಸುವ ವಸ್ತುಗಳನ್ನ ಬಳಸಿ ಮಾಟ ಮಂತ್ರಗಳನ್ನ ಪ್ರಯೋಗಿಸಿರುವ ಘಟನೆ ನಡೆದಿದ್ದು. ಪ್ರಕರಣ ರಿಪ್ಪನ್ ಪೇಟೆಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೊಸನಗರ ತಾಲೂಕು ಬೆನವಳ್ಳಿ ಗ್ರಾಮದ ಮುಂದೆ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ರಂಗೋಲಿ ಹಿಟ್ಟಿನ ಗೊಂಬೆ, ಮೊಟ್ಟೆ, ಬಟ್ಟೆ, ಕೂದಲು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಊರಿನ ಸಂಪರ್ಕ ರಸ್ತೆ ಸಮೀಪ ವಾಮಾಚಾರ ಮಾಡಿರುವುದು ಕಂಡು ಬಂದಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಬೆನವಳ್ಳಿಯ ಸರ್ವೆ ನಂಬರ್ 36ರಲ್ಲಿ ವಾಮಾಚಾರ ನಡೆದಿದೆ. ಗ್ರಾಮಸ್ಥರು, ಶಾಲೆ ಮಕ್ಕಳು ಈ ಮಾರ್ಗವಾಗಿ ನಿತ್ಯ ಓಡಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕ ಮೂಡಿದೆ. ಈ ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡುತ್ತಿದ್ದಾರೆ.
ಘಟನೆ ಕುರಿತು ಬೆನವಳ್ಳಿ ಗ್ರಾಮಸ್ಥರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.