ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಶಾಸಕ ಹರತಾಳು ಹಾಲಪ್ಪ ಸಾಗರ ಹಾಗೂ ಹೊಸನಗರ ಕ್ಷೇತ್ರದ ಮರಳು ಲಾರಿ ಮಾಲೀಕರಿಂದ ಅಕ್ರಮವಾಗಿ ಕಮಿಶನ್ ಪಡೆದಿದ್ದಾರೆಂದು ಆರೋಪ ಮಾಡಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಾವು ಆಣೆ ಮಾಡಬೇಕು ಹಣವನ್ನು ಪಡೆದಿಲ್ಲವೆಂದು ಎಂದು ಸವಾಲು ಎಸೆದಿದ್ದರು.
ಇದರ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶಾಸಕ ಹರತಾಳು ಹಾಲಪ್ಪ ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ನಾವು ಯಾವುದೇ ಮರಳು ಲಾರಿ ಮಾಲೀಕರಿಂದ ಕಮೀಷನ್ ಹಾಗೂ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಿದ್ದಾರೆ.
ಬೇಳೂರು ಮಾಡಿರುವ ಆರೋಪಗಳು ಸುಳ್ಳು ಹಣ ಪಡೆದಿರುವ ಸಾಕ್ಷಿಗಳಿದ್ದರೆ ಅದನ್ನು ಲೋಕಾಯುಕ್ತ ಅಥವಾ ಎಸಿಬಿ ಅವರಿಗೆ ನೀಡಿ ಕೇಸ್ ದಾಖಲಿಸುವಂತೆ ಸವಾಲು ಹಾಕಿದರು.
ಇನ್ನೂ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಈ ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದು ಇವರೂ ಸಹ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕರು ಮರಳು ಲಾರಿ ಮಾಲೀಕರಿಂದ ಕಮಿಶನ್ ಪಡೆದಿದ್ದಾರೆಂದು ಆಣೆ ಮಾಡುತ್ತಿದ್ದು ಹಾಲಿ ಹಾಗೂ ಮಾಜಿ ಶಾಸಕರ ಆಣೆ ಪ್ರಮಾಣದ ವಾರ್ ಇಲ್ಲಿಗೆ ಮುಗಿಯುತ್ತಿದೆ.
ಒಟ್ಟಾರೆ ಹಾಲಿ ಹಾಗೂ ಮಾಜಿ ಶಾಸಕರ ಆಣೆಪ್ರಮಾಣಗಳ ಮೇಲಾಟ ಇಲ್ಲಿಗೆ ಮುಗಿದಿದ್ದು ನಿಜಾಂಶ ದೇವರೇ ಬಲ್ಲ ಎನ್ನುವಂತಾಗಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇