Headlines

ಶಾಸಕ ಹಾಲಪ್ಪರವರ ಎದುರೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ವೀಡಿಯೋ ವೈರಲ್ : ತಾರಕಕ್ಕೇರಿದ ಸಾಗರದ ಜ್ಯೂನಿಯರ್ ಕಾಲೇಜಿನ ಹಿಜಾಬ್ – ಕೇಸರಿ ಘರ್ಷಣೆ !!!!!!

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಜ್ಯೂನಿಯರ್ ಕಾಲೇಜ್ ವಿದ್ಯಾರ್ಥಿಗಳು ಹಿಜಾಬ್ ಹಾಗೂ  ಕೇಸರಿ ಶಾಲಿನ ವಿಚಾರವಾಗಿ ಇಂದು ಬೆಳಿಗ್ಗೆ ಕಾಲೇಜಿನ ಆವರಣದ ಬಳಿ ಮಾತಿನ ಚಕಮಕಿ ನಡೆಯುತ್ತಿತ್ತು.ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ  ಆಗಮಿಸಿದ್ದರು ಇದರ ನಡುವೆ ಸಣ್ಣಪುಟ್ಟ ಗಲಾಟೆ ನಡೆದಿದ್ದು  ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.

ಇದನ್ನು ಮನಗಂಡ ಶಾಸಕ ಹರತಾಳು ಹಾಲಪ್ಪನವರು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ್ದರು.

ವಿದ್ಯಾರ್ಥಿಗಳ ಸಮೂಹ ಶಾಸಕ ಹರತಾಳು ಹಾಲಪ್ಪ ನವರ ಆಸ್ಪತ್ರೆಯ ಭೇಟಿಯಲ್ಲೂ ಹಾಜರಿದ್ದರು.ಇದರ ನಡುವೆ ವಿದ್ಯಾರ್ಥಿಗಳು ಒಬ್ಬ ವ್ಯಕ್ತಿಯನ್ನು ಶಾಸಕ ಹರತಾಳು ಹಾಲಪ್ಪನವರ ಎದುರಿಗೆ ಹೊಡೆಯುವಂತಹ ದೃಶ್ಯ ಇದೀಗ ವೈರಲ್ ಆಗಿದ್ದು ಕಾರಣ ಏನು ಎಂಬುದು ತಿಳಿಯಬೇಕಾಗಿದೆ.

ಸ್ಥಳಕ್ಕೆ ಶಿವಮೊಗ್ಗದಿಂದ ಹೆಚ್ಚುವರಿ ಪೊಲೀಸರು ಆಗಮಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಹಿಜಾಬ್ ಹಾಗೂ ಕೇಸರಿಯ ಸಂಘರ್ಷ ತಾರಕಕ್ಕೇರಿದ್ದು ಸಾಗರದಲ್ಲೂ 144 ಸೆಕ್ಷನ್ ಜಾರಿಯಾಗುತ್ತಾ ಎನ್ನುವ ಪ್ರಶ್ನೆಗಳು ಮೂಡುತ್ತಿವೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇



Leave a Reply

Your email address will not be published. Required fields are marked *