ರಿಪ್ಪನ್ ಪೇಟೆ : ವರದಕ್ಷಿಣೆಗಾಗಿ ಬೆತ್ತಲೆ ವಿಡಿಯೋ ತೆಗೆದು ಬೆದರಿಕೆ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ, ಅತ್ತೆ-ಮಾವ ಸೇರಿದಂತೆ ನಾಲ್ವರ ವಿರುದ್ಧ ಮಹಿಳೆಯೊಬ್ಬರು ರಿಪ್ಪನ್ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶಂಗೇರಿಯ ವೆಲ್ ಕಮ್ ಗೇಟ್ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಸನಗರ ತಾಲೂಕಿನ ಹುಂಚ ಹೋಬಳಿಯ ಗ್ರಾಮವೊಂದರ ಸಂತ್ರಸ್ತೆಗೆ ಮತ್ತು ಶೃಂಗೇರಿ ವೆಲೆ ಕಮ್ ಗೇಟ್ನ ಸಲ್ಮಾನ್ ಜೊತೆ ವಿವಾಹ 2021ರ ಮೇ 22ರಂದು ವಿವಾಹ ನಡೆದಿತ್ತು. ಈ ವೇಳೆ 90 ಗ್ರಾಂ ಬಂಗಾರ, 3 ಲಕ್ಷ ರೂ. ವರದಕ್ಷಿಣೆ ನೀಡಲು ಸಂತ್ರಸ್ತೆಯ ತಂದೆ ಒಪ್ಪಿದ್ದರು. ಮದುವೆಗೆ ಮುಂಚೆ 2 ಲಕ್ಷ ರೂ. ನಗದು, 4 ಗ್ರಾಂನ ಉಂಗುರ ಹಾಗೂ ಮದುವೆ ಬಳಿಕ 90 ಗ್ರಾಂ ಬಂಗಾರ, ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು.
ಆದರೆ ಬಾಕಿ ಒಂದು ಲಕ್ಷ ರೂ. ವರದಕ್ಷಿಣೆ ನೀಡಿರಲಿಲ್ಲ. ಈ ವಿಚಾರದಲ್ಲಿ ಗಲಾಟೆ ನಡೆದು ಸಂಧಾನದ ಬಳಿಕ ಮದುವೆ ನೆರವೇರಿತ್ತು.ಹಲವು ತಿಂಗಳ ಬಳಿಕ ಸಾಹೀರಾ ಮತ್ತು ಶೌಕತ್ ಖಾನ್ ವರದಕ್ಷಿಣೆ ತರುವಂತೆ ಕಿರುಕುಳ ನೀಡಲಾರಂಭಿಸಿದ್ದರು. ಅದಕ್ಕೆ ಸಲ್ಮಾನ್ಕುಮ್ಮಕ್ಕು ನೀಡುತ್ತಿದ್ದ. ಈ ನಡುವೆ ಕಿಗ್ಗದ ಸಮೀನಾ ಕೂಡ ಕಿರುಕುಳ ನೀಡುತ್ತಿದ್ದರು. ಜತೆಗೆ ಬೆತ್ತಲೆ ವಿಡಿಯೋವನ್ನು ಸ್ನಾೃಪ್ಚಾಟ್ಗೆ ಅಪ್ಲೋಡ್ ಮಾಡುವಂತೆ ಸಲ್ಮಾನ್ ಪದೇ ಪದೇ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಅಪ್ಲೋಡ್ ಮಾಡಿದಿದ್ದರೆ ತನ್ನ ಮೊಬೈಲ್ನಲ್ಲಿರುವ ಬೆತ್ತಲೆ ವಿಡಿಯೋಗಳನ್ನು ಬೇರೆಯವರಿಗೆ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.
ಕಿರುಕುಳ ತಾಳಲಾರದೇ ಸಂತ್ರಸ್ತೆ ಇತ್ತೀಚೆಗೆ ತವರು ಮನೆಗೆ ಬಂದಿದ್ದರು. ಅಲ್ಲಿಗೂ ಬಂದಿದ್ದ ಸಲ್ಮಾನ್ ಪತ್ನಿಗೆ ತಲಾಖ್ ಕೂಡ ನೀಡಿ ಮರಳಿದ್ದ. ಈ ನಡುವೆ ಸಂತ್ರಸ್ತೆಗೆ ಮತ್ತೆ ಕರೆ ಮಾಡಿದ್ದ ಆತ ಬೆತ್ತಲೆ ವಿಡಿಯೋವನ್ನು ಸ್ನಾೃಪ್ಚಾಟ್ಗೆ ಅಪ್ಲೋಡ್ ಮಾಡಬೇಕು. ವರದಕ್ಷಿಣೆ ತರಬೇಕು. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂದು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.