ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದರು.
ಈ ಹಿನ್ನಲೆಯಲ್ಲಿ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮೃತ ಕಗ್ಗಲಿ ವೀರಭದ್ರಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ರೈತ ಸಂಘಟನೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಗ್ಗಲಿ ವೀರಭದ್ರಪ್ಪ ಗೌಡರು 80 ರ ದಶಕದಲ್ಲಿ ರೈತ ಪರ ಹೋರಾಟದಲ್ಲಿ ಧಾರವಾಡ ಹಿಂಡಲಗಾ ಜೈಲಿನಲ್ಲಿ 21 ದಿನ ಜೈಲು ವಾಸ ಅನುಭವಿಸಿದ್ದನ್ನು ಈ ಸಂಧರ್ಭದಲ್ಲಿ ಗೃಹ ಸಚಿವರು ನೆನಪಿಸಿಕೊಂಡರು.
ಈ ಸಂಧರ್ಭದಲ್ಲಿ ಮೃತರ ಪತ್ನಿ ಪಿತಾಂಬರಮ್ಮ ಹಾಗೂ ಪುತ್ರರಾದ ಕಗ್ಗಲಿ ಲಿಂಗಪ್ಪ ,ಬಿಜೆಪಿ ಮುಖಂಡರಾದ ಕಲ್ಲೂರು ನಾಗೇಂದ್ರಪ್ಪ,ಹೆದ್ದಾರಿಪುರ ಗ್ರಾಪಂ ಸದಸ್ಯ ವಿಶ್ವನಾಥ್,ಈಶ್ವರ್ ಹಾಗೂ ಇನ್ನಿತರರಿದ್ದರು.