ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನ ಹೆಚ್ಚಳದ ಹಿನ್ನಲೆಯಲ್ಲಿ ನಾಳೆ ಜಿಲ್ಲೆಯ ಒಂಬತ್ತು ಕಾಲೇಜುಗಳು ಹಾಗೂ ನಾಲ್ಕು ಶಾಲೆಗಳಿ ರಜೆ ಘೋಷಿಸಲಾಗಿದೆ.
ಮಕ್ಕಳಲ್ಲಿ ಕೊರೋನ ಹೆಚ್ಚಳವಾದರೆ ಕ್ಲಸ್ಟರ್ ರೀತಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊರೋನ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವ ಈಶ್ವರಪ್ಪ ಇಂದು ಸಂಜೆ ಯಾವ ಯಾವ ಶಾಲೆಗಳು ನಾಳೆ ರಜೆ ಘೋಷಿಸಲಿವೆ ಎಂದು ತಿಳಿಸಿದ್ದರು.
ಅದರಂತೆ ರಾಗಿಗುಡ್ಡದ ಅಂಬೇಡ್ಕರ್ ವಸತಿ ಶಾಲೆ, ಮುರಾರ್ಜಿ ಶಾಲೆ, ಮುರಾರ್ಜಿ ಕಾಲೇಜು, ತೀರ್ಥಹಳ್ಳಿಯ ಬಸವಾನಿ, ಭದ್ರಾವತಿ ಶಿವಮೊಗ್ಗ ಬಿಹೆಚ್ ರಸ್ತೆಯಲ್ಲಿ ಕಾಲೇಜುಗಳು ಮಾಳೂರು ಶಾಲೆ ಸೇರಿದಂತೆ 9 ಕಾಲೇಜು ಮತ್ತು 4 ಶಾಲೆಗಳು ನಾಳೆ ಬಂದ್ ಆಗಲಿವೆ.
ಯಾವುದೇ ಶಾಲೆಗಳಲ್ಲಿ ಅಥವಾ ಕಾಲೇಜುಗಳಲ್ಲಿ 5 ಕ್ಕಿಂತ ಹೆಚ್ಚು ಪಾಸಿಟಿವ್ ಪತ್ತೆಯಾದರೆ ಮೂರು ದಿನ ರಜೆ ಘೋಷಿಸಲಾಗುತ್ತದೆ. ಯಾವ ಶಾಲೆಯಲ್ಲಿ 20 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾದರೆ ಆ ಶಾಲೆಗಳು 7 ದಿನಗಳ ಮಟ್ಟಿಗೆ ರಜೆ ಆಗಲಿದೆ.
ಆದರೆ ಕೊರೋನ ಭಯಕ್ಕೆ ಹೆಚ್ಚಿನ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬರುತ್ತಾ ಇಲ್ಲ. ಈ ವಿಷಯ ಬೆಳಿಗ್ಗೆ ಸಚಿವರ ಸಮ್ಮುಖದಲ್ಲಿ ಚರ್ಚೆ ಆಗಿತ್ತು. ಆದರೆ ಮೂರನೇ ಅಲೆ ಸಧ್ಯಕ್ಕೆ ಕ್ಯಾಶ್ಯುಯಾಲಿಟಿ ಇಲ್ಲದ ಕಾರಣ ಎಲ್ಲವನ್ನೂ ನಿವಾರಿಸಿಕೊಂಡು ಹೋಗಲಾಗುತ್ತಿದೆ ಎಂದೂ ತಿಳಿದುಬಂದಿದೆ.