w
Headlines
Home » ಮೃತ ಕಗ್ಗಲಿ ವೀರಭದ್ರಪ್ಪ ಗೌಡ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಮೃತ ಕಗ್ಗಲಿ ವೀರಭದ್ರಪ್ಪ ಗೌಡ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದರು.
ಈ ಹಿನ್ನಲೆಯಲ್ಲಿ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮೃತ ಕಗ್ಗಲಿ ವೀರಭದ್ರಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ರೈತ ಸಂಘಟನೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಗ್ಗಲಿ ವೀರಭದ್ರಪ್ಪ ಗೌಡರು 80 ರ ದಶಕದಲ್ಲಿ ರೈತ ಪರ ಹೋರಾಟದಲ್ಲಿ ಧಾರವಾಡ ಹಿಂಡಲಗಾ ಜೈಲಿನಲ್ಲಿ 21 ದಿನ ಜೈಲು ವಾಸ ಅನುಭವಿಸಿದ್ದನ್ನು ಈ ಸಂಧರ್ಭದಲ್ಲಿ ಗೃಹ ಸಚಿವರು ನೆನಪಿಸಿಕೊಂಡರು.
ಈ ಸಂಧರ್ಭದಲ್ಲಿ ಮೃತರ ಪತ್ನಿ ಪಿತಾಂಬರಮ್ಮ ಹಾಗೂ ಪುತ್ರರಾದ ಕಗ್ಗಲಿ ಲಿಂಗಪ್ಪ ,ಬಿಜೆಪಿ ಮುಖಂಡರಾದ ಕಲ್ಲೂರು ನಾಗೇಂದ್ರಪ್ಪ,ಹೆದ್ದಾರಿಪುರ ಗ್ರಾಪಂ ಸದಸ್ಯ ವಿಶ್ವನಾಥ್,ಈಶ್ವರ್  ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.