ಬುದ್ಧನಗರದಲ್ಲಿ ವಾಹನ ತಪಾಸಣೆ ಮಾಡುವಾಗ ಅಕ್ರಮ ಅಕ್ಕಿ ಸಾಗಾಣಿಕೆ ಪತ್ತೆಯಾಗಿದೆ. ಬಿಪಿಎಲ್ ಕಾರ್ಡ ಹೊಂದಿದವರಿಗೆ ಉಚಿತವಾಗಿ ನೀಡುವ ಅಕ್ಕಿಗಳನ್ನ ಚೀಲದಲ್ಲಿ ತುಂಬಿಸಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಅಕ್ರಮ ಅಕ್ಕಿ ಪತ್ತೆಯಾಗಿದೆ.
ಬುದ್ದನಗರದಲ್ಲಿ ಗ್ಯಾಸ್ ಪಂಪ್ ನಲ್ಲಿ ದೊಡ್ಡಪೇಟೆ ಪೊಲೀಸರು ಮತ್ತು ಆಹಾರ ನಿರೀಕ್ಷಕರು ಬ್ಯಾರಿಕೇಡ್ ನಿರ್ಮಿಸಿ ತಪಾಸಣೆ ಮಾಡುವಾಗ ಕೆಎ 15 ಎ ೪೨೬೬ ಕ್ರಮ ಸಂಖ್ಯೆಯ ವಾಹನದಲ್ಲಿ ಅಕ್ರಮ ಅಕ್ಕಿ ಪತ್ತೆಯಾಗಿದೆ. 
೫೦ ಕೆಜಿಯ ಒಟ್ಟು ೮೦ ಚೀಲಗಗಳು ಪತ್ತೆಯಾಗಿದೆ.
ಈ ಅಕ್ಕಿಯನ್ನ ಎಲ್ಲಿಗೆ ಸಾಗಿಸಲಾಗುತ್ತಿದೆ ಎಂದು ಕೇಳಿದಾಗ ವಾಹನದ ಚಾಲಕ ಗೌತಮ್ ಇದನ್ನು ನಾಗರಾಜ್ ಎಂಬುವರಿಗೆ ಸಾಗಿಸಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದು ಪೊಲೀಸರಿಗೆ ಮತ್ತು ಆಹಾರ ನಿರೀಕ್ಷಕರಿಗೆ ಅನುಮಾನ ಹುಟ್ಟಿಸಿದೆ. 
ಬುದ್ಧನಗರದಲ್ಲಿ ಕೆ.ಸಿ.ರಂಗನಾಥ್ ಸ್ಟೋರ್ ಇದ್ದು ನಾಗರಾಜ್ ನ್ಯಾಯಬೆಲೆ ಅಂಗಡಿಗೆ ಸಾಗಿಸುತಿರುವುದು ಶಂಕೆಗೆ ಈಡುಮಾಡಿಕೊಟ್ಟಿದೆ.ಗೂಡ್ಸ್ ವಾಹನವನ್ನು ವಶಪಡಿಸಿಕೊಂಡ ಪೊಲೀಸರು ವಾಹನದ ಚಾಲಕ ಗೌತಮ್ ನನ್ನ ಬಂಧಿಸಿದ್ದಾರೆ.
 ಮೋಹನ್ ಮತ್ತು ನಾಗರಾಜ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
		 
                         
                         
                         
                         
                         
                         
                         
                         
                        