ವಿಧಾನ ಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ ಮಧ್ಯಾಹ್ನದವರೆಗೂ ಅನೇಕ ಪ್ರಮುಖರು ಮತ ಚಲಾಯಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿರುವ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಮತದಾನ ಮಾಡಿದರು.
ಶಿಕಾರಿಪುರದಲ್ಲಿ ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಮತಚಲಾಯಿಸಿದರೆ, ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ, ಆಯನೂರು ಮಂಜುನಾಥ್, ರುದ್ರೇಗೌಡ, ಮೇಯರ್ ಸುನೀತ ಅಣ್ಣಪ್ಪ ಒಳಗೊಂಡತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಒಟ್ಟಿಗೆ ಬಂದು ಮತ ಚಲಾಯಿಸಿದರು.
ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ರವರು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಮತ ಕೇಂದ್ರದಲ್ಲಿ ತಮ್ಮ ಮತವನ್ನು ಚಲಾಯಿಸಿದರು .ಭಾರತೀಯ ಜನತಾ ಪಕ್ಷದ ಕಚೇರಿಯಿಂದ ಪಟ್ಟಣ ಪಂಚಾಯತ್ ಸದಸ್ಯರಾದ ಯತಿರಾಜ್, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ ,ರವೀಶ್ ಭಟ್, ಜ್ಯೋತಿ ಮೋಹನ್ , ಜ್ಯೋತಿಗಣೇಶ್ ,ಮತ್ತು ಪಕ್ಷದ ಮುಖಂಡರೊಂದಿಗೆ ರೊಂದಿಗೆ ಸೊಪ್ಪುಗುಡ್ಡೆಯಲ್ಲಿರುವ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ಆಗಮಿಸಿ ತಮ್ಮ ಮತವನ್ನು ಚಲಾಯಿಸಿದರು .ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಯೂ ಆದ ಅರುಣ್ ರವರು 1500 ಅಂತರದ ಬಹುಮತದಿಂದ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೊರಬದಲ್ಲಿ ಪುರಸಭೆಯ ವಿಪಕ್ಷ ನಾಯಕ ಪ್ರಸನ್ನ ಕುಮಾರ್ ದೊಡ್ಡಮನಿ, ಶಿವಮೊಗ್ಗ ಪಾಲಿಕೆಯ ವಿಪಕ್ಷ ನಾಯಕಿ ಯಮುನಾರಂಗೇಗೌಡ, ರಮೇಶ್ ಹೆಗ್ಡೆ, ಯೋಗೀಶ್, ರೇಖಾ ರಂಗನಾಥ್ ಮೊದಲಾದವರು ಮತಚಲಾಯಿಸಿದರು.
ಸಾಗರ ಪಟ್ಟಣದಲ್ಲಿ ಶಾಸಕ ಹರತಾಳು ಹಾಲಪ್ಪ ನಗರಸಭೆ ಬಿಜೆಪಿ ಸದಸ್ಯರೊಂದಿಗೆ ಮತ ಚಲಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಹರತಾಳು ಹಾಲಪ್ಪ ಗೆಲುವು ನಮ್ಮದೇ ಎಂದರು.
ರಿಪ್ಪನ್ ಪೇಟೆ ಗ್ರಾಪಂ ಸದಸ್ಯರ ಮತದಾನ :
ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಒಂಬತ್ತು ಸದಸ್ಯರು ಒಟ್ಟಾಗಿ ಬಂದು ಮತದಾನ ಮಾಡಿದ್ದಾರೆ ಈ ಸಂಧರ್ಭದಲ್ಲಿ ಸದಸ್ಯರಾದ ಆಸೀಫ಼್ ಭಾಷಾಸಾಬ್, ಮಧುಸೂದನ್, ಚಂದ್ರೇಶ್ ಎನ್, ಧನಲಕ್ಷ್ಮಿ ಹಾಗೂ ಇನ್ನಿತರ ಸದಸ್ಯರಿದ್ದರು.
ನಂತರ ಬಿಜೆಪಿ ಬೆಂಬಲಿತ ಹನ್ನೆರಡು ಸದಸ್ಯರು ಒಟ್ಟಾಗಿ ಬಂದು ಗ್ರಾಮ ಪಂಚಾಯತಿಯಲ್ಲಿ ಮತದಾನ ಮಾಡಿದರು ಈ ಸಂಧರ್ಭದಲ್ಲಿ ಸದಸ್ಯರಾದ ಸುಧೀಂದ್ರ ಪೂಜಾರಿ,ಸುಂದರೇಶ್,ಮಂಜುಳಾ ಕೆ ರಾವ್,ಮಹಾಲಕ್ಷ್ಮಿ ಅಣ್ಣಪ್ಪ ಹಾಗೂ ಇನ್ನಿತರ ಸದಸ್ಯರಿದ್ದರು.