ರಿಪ್ಪನ್ ಪೇಟೆ : ಪದವಿ ಪೂರ್ವ ಕಾಲೇಜಿನ 56 ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಇಲ್ಲಿನ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗೆ ಕರೋನ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜಿನ 56 ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಸ್ಲ್ಯಾಬ್ ಪರೀಕ್ಷೆ ನಡೆಸಲಾಗಿತ್ತು.
ಎಲ್ಲಾ 56 ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಗಂಟಲು /ಮೂಗಿನ ದ್ರವದ RTPCR ಟೆಸ್ಟ್ ವರದಿ ನೆಗೆಟಿವ್ ಬಂದಿರುತ್ತದೆ ಎಂದು ತಿಳಿದುಬಂದಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ರಿಪ್ಪನ್ ಪೇಟೆ ಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕದ ಛಾಯೆ ಮೂಡಿತ್ತು ಆದರೆ ಇಂದು ಎಲ್ಲಾ ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು ಪೋಷಕರು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೇ ಗೆ ಹಾಜರಾಗಬಹುದಾಗಿದೆ.
ಘಟನೆಯ ಹಿನ್ನಲೆ :
ಡಿ.1 ರಂದು ಪ್ರಥಮ ಪಿಯು ವಿದ್ಯಾರ್ಥಿ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ಪಿಹೆಚ್ ಸಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾನೆ ಕೋವಿಡ್ ಪರೀಕ್ಷೆಯ ವರದಿಯು ಸೋಮವಾರ ಪಾಸಿಟಿವ್ ಎಂದು ಬಂದಿದೆ. ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಮಂಗಳವಾರ ದಿನ ವಿದ್ಯಾರ್ಥಿಯ ಮನೆಗೆ ಬಂದಿದ್ದಾರೆ.ಆದರೆ ಆತ ಮನೆಯಲ್ಲಿ ಇರದೇ ರಿಪ್ಪನ್ ಪೇಟೆಯ ಪದವಿ ಪೂರ್ವ ಕಾಲೇಜಿಗೆ ಹೋಗಿರುವುದಾಗಿ ಮನೆಯವರು ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಕಾಲೇಜಿಗೆ ಬಂದು ವಿದ್ಯಾರ್ಥಿಗೆ ಡಿ.14 ರವರೆಗೆ ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಿದ್ದಾರೆ.. ನಂತರ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ರವರು ಸಂಪೂರ್ಣ ಕಾಲೇಜನ್ನು ಸ್ಯಾನಿಟೈಜರ್ ಮಾಡಿದ್ದರು,ಆತನ ತರಗತಿಯಲ್ಲಿ ಇದ್ದ ಎಲ್ಲಾ 56 ವಿದ್ಯಾರ್ಥಿಗಳ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿತ್ತು.