ರಿಪ್ಪನ್ ಪೇಟೆಯಲ್ಲಿ ಇದೇ 27 ಕ್ಕೆ ಅದ್ದೂರಿ ಕನ್ನಡ ರಾಜ್ಯೋತ್ಸವ : ಪದ್ಮಶ್ರಿ ಪುರಸ್ಕೃತ ಹರೇಕಾಳ ಹಾಜಬ್ಬ ಹಾಗೂ ಮಂಜಮ್ಮ ಜೋಗತಿಗೆ ಸನ್ಮಾನ ಕಾರ್ಯಕ್ರಮ

ರಿಪ್ಪನ್ ಪೇಟೆ : ನವೆಂಬರ್ 27 ರ ಶನಿವಾರ ರಿಪ್ಪನ್ ಪೇಟೆಯಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ದಿಂದ  ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆರ್ ಎ ಚಾಬುಸಾಬ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.
ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿಯ ಕುವೆಂಪು ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ನವಂಬರ್ 27 ರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ ಹರೇಕಾಳ ,ಮಂಜಮ್ಮ ಜೋಗತಿ ಹಾಗೂ ಸ್ಥಳೀಯ ವಿಜ್ಞಾನಿ, ರಾಜ್ಯ ಪ್ರಶಸ್ತಿ ಪಡೆದ ಪ್ರತಿಭೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಈ ಸಮಾರಂಭದಲ್ಲಿ ಹಾಲಿ ಶಾಸಕರು ಹಾಗೂ ಮಾಜಿ ಸಚಿವರು, ಸಾಹಿತಿಗಳು ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮಕ್ಕೆ ಕನ್ನಡ ಅಭಿಮಾನಿಗಳು ಕನ್ನಡದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಹಾಗೂ ಈ ಸಂಘ ಯಾವುದೇ ಸಂಘಕ್ಕೆ ಪರ್ಯಾಯ ಸಂಘವಲ್ಲ ಕನ್ನಡ ನಾಡು-ನುಡಿಗೆ ಹೋರಾಡುವ ಸಂಘವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಪಂ ಸದಸ್ಯರಾದ ಧನಲಕ್ಷ್ಮಿ ಮಾತನಾಡಿ ಈ ಸಲದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದೇವೆ.ಎಲ್ಲಾ ಕನ್ನಡ ಪ್ರೇಮಿಗಳು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಮನವಿ ಮಾಡಿದರು.
ನಂತರ ಮಾತನಾಡಿದ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿಗಳಾದ  ರಮೇಶ್ ಫ಼್ಯಾನ್ಸಿ ನವೆಂಬರ್ ತಿಂಗಳಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ಕೆಲ ವ್ಯಕ್ತಿಗಳು ಮುಂದೂಡಲಾಗಿದೆ ಎಂದು ಗಾಳಿ ಸುದ್ದಿ ಹಬ್ಬಿಸುತ್ತಿದ್ದು ಇದಕ್ಕೆ ಕನ್ನಡ ಪ್ರೇಮಿಗಳು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಸ್ತೂರಿ ಕನ್ನಡ ಸಂಘದ ಆರ್ ಎನ್  ಮಂಜುನಾಥ ,ರಮೇಶ್ ಫ್ಯಾನ್ಸಿ ,ಆಸಿಫ್, ಧನಲಕ್ಷ್ಮಿ ,ಪಿಯುಸ್ ರೋಡ್ರಿಗಸ್ ,ರಾಜು ದೂನ,ಗಣಪತಿ, ಜಿ ಆರ್ ಗೋಪಾಲಕೃಷ್ಣ, ಉಮೇಶ್ ಮಳವಳ್ಳಿ, ಮಂಜುನಾಥ್ ,ನಾಗರಾಜ ಕೆದಲಗುಡ್ಡೆ, ಪ್ರಸನ್ನ ಕಲ್ಮಕ್ಕಿ, ನವೀನ್ ,ಸೀಮಾ ಇನ್ನು ಮುಂತಾದವರು ಹಾಜರಿದ್ದರು. 

Leave a Reply

Your email address will not be published. Required fields are marked *