ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಇದೀಗ ನೂತನ ಎ ಎಸ್ ಪಿ ಯಾಗಿ ಐಪಿಎಸ್ ಅಧಿಕಾರಿಯಾದ ರೋಹನ್ ಜಗದೀಶ್ ಚಾರ್ಜ್ ಪಡೆದಿದ್ದಾರೆ.
ಅಧಿಕಾರ ಸ್ವೀಕರಿಸಿ ಇನ್ನೂ 1 ವಾರವಾಗಿದೆ ಅಷ್ಟೆ, ಇದೀಗ ಸ್ಮಾರ್ಟ್ ಐಪಿಎಸ್ ಅಧಿಕಾರಿಯವರು ಸಾಗರವನ್ನು ಅಪರಾಧ ಮುಕ್ತವನ್ನಾಗಿಸಲು ಪಣ ತೊಟ್ಟಿದ್ದಾರೆ. ಅಂತೆಯೇ ಇಂದು ಸಾಗರದ ಸುತ್ತಮುತ್ತ ಬೀದಿ ಕಾಮಣ್ಣರ ಮೇಲೆ ಕಣ್ಣಿಟ್ಟು ಹುಡುಗಿಯರ ವಿಚಾರಕ್ಕೆ ಹೋಗದಿರುವಂತೆ ಬಿಸಿ ಮುಟ್ಟಿಸಿದ್ದಾರೆ.
ಬುಲೆಟ್ ಬೈಕ್ ಗಳಲ್ಲಿ ಕರ್ಕಶ ಸೈಲೆನ್ಸರ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಬೈಕ್ ಸವಾರರಿಗೂ ಕೂಡ ಐ ಎಂ ವಿ ಕೇಸ್ ಗಳನ್ನು ದಾಖಲಿಸುವಂತೆ ಸಹ ಸಿಬ್ಬಂದಿಗೆ ಸೂಚಿಸಿದ್ದಾರೆ.
ಅಲ್ಲಲ್ಲಿ ಹರಟೆ ಹೊಡೆಯುವ ಬೀದಿ ಕಾಮಣ್ಣರ ಮೇಲೆ ನಿಗಾ:
ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದಾಗಲೀ ಅಥವಾ ಚುಡಾಯಿಸುವುದು ಹಾಗೂ ಫೋಟೋ ಕ್ಲಿಕ್ಕಿಸುವುದಾಗಲೀ ಕಂಡುಬಂದಲ್ಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಎಸ್ಪಿ ರೋಹನ್ ಜಗದೀಶ್ ರವರು ಪೋಸ್ಟ್ ಮ್ಯಾನ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ನೂತನ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ನೇತೃತ್ವದ ತಂಡದಿಂದ ಇನ್ನಾದರೂ ಸಾಗರದಲ್ಲಿ ಅಪರಾಧ ಇಳಿಮುಖವಾಗಲೀ ಎಂಬುದೇ ನಮ್ಮ ಆಶಯ.
ವರದಿ : ಪವನ್ ಕುಮಾರ್ ಕಠಾರೆ