ಶಿವಮೊಗ್ಗ: ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿರೋ ಗ್ರಾಮೀಣಾಭಿವೃದ್ಧಿ ಸಚಿವರಾಗಿರೋ ಕೆ.ಎಸ್ ಈಶ್ವರಪ್ಪ ಶಿಕಾಳಕೊಪ್ಪದಲ್ಲಿ ನಡೆದ ಘಟನೆಯನ್ನ ಖಂಡಿಸಿದಿದ್ದಾರೆ. ಕೆಲವು ಮುಸಲ್ಮಾನರು ಬಹಳ ತಲೆಹರಟೆಗಳಾಗಿದ್ದು,ಅವರೇ ಮುಸ್ಲೀಂರ ಉದ್ದಾರಕರು ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ ಎಂದುಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು ಶಿರಾಳಕೊಪ್ಪದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ನಡೆಸಿದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿದ ಅವರು ಚೈತ್ರಾ ಕುಂದಾಪುರ ಅವರ ಹೇಳಿಕೆಯನ್ನು ಹಿಂದೂ ಯುವಕನೊಬ್ಬ ಕೇವಲ ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಕ್ಕೆ ಅಂಗಡಿಗೆ ನುಗ್ಗಿ ಹೊಡೆಯುತ್ತಾರೆ ಎಂದರೆ ಅವರಿಗೆ ಎಷ್ಟು ಸೊಕ್ಕು ಇರಬೇಕು. ಇದು ಸರಿಯಲ್ಲ ಈಗಾಗಲೆ ಹಲ್ಲೆ ಮಾಡಿದವರು ಜೈಲಿನಲ್ಲಿರಬೇಕು.
ಈ ರೀತಿ ನಡೆದುಕೊಳ್ಳೊದು ಎಲ್ಲಾ ಮುಸ್ಲಿಂವರು ಎಂದು ನಾನು ಹೇಳೋಲ್ಲಾ ಆದರೆ ಹೀಗೆ ನಡೆದುಕೊಳ್ಳುವ ಮುಸ್ಲೀಮರು ಎಚ್ಚರಿಕೆಯಿಂದ ಇರಬೇಕು. ಈ ವ್ಯವಸ್ಥೆ ರಾಜ್ಯದಲ್ಲಾಗಲಿ ದೇಶದಲ್ಲಾಗಲಿ ನಡೆಯಲು ಬಿಡೋದಿಲ್ಲ. ಹಿಂದುತ್ವದ ಸುದ್ದಿಗೆ ಬಂದರೆ ಭಾರಿ ಅನುಭವಿಸುತ್ತೀರಿ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.