ರಿಪ್ಪನ್ ಪೇಟೆ : ಕನ್ನಡದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣದಿಂದ ಇಡೀ ಕರುನಾಡೇ ಇದೀಗ ದುಃಖದಲ್ಲಿ ಮರುಗಿದೆ.ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ ಕನ್ನಡದ ರಾಜಕುಮಾರನಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಟೇತಾರಿಗದಲ್ಲಿ ಯುವ ಕ್ರಿಕೆಟರ್ಸ್ ಶೆಟ್ಟಿಬೀಡು ಇವರ ವತಿಯಿಂದ ಬೃಹತ್ ಆಕಾರದ ಕಟೌಟ್ ಗೆ ಹೂವಿನ ಹಾರ ಹಾಕಿ ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಅಗಲಿದ ನಾಯಕನಿಗೆ ಕಂಬನಿ ಮಿಡಿದರು.
ಈ ಸಂಧರ್ಭದಲ್ಲಿ ಯುವ ಕ್ರಿಕೆಟರ್ ತಂಡದ ನಾಗರಾಜ್ ಎ,ರಾಜೇಶ್ ಎ,ಅಭಿ ಪೂಜಾರಿ,ಸುಬ್ಬ ಪೂಜಾರಿ,ಅಕ್ಷಯ್,ಹಾಲೇಶ,ರವಿ ಕೆ,ಪ್ರದೀಪ್,ಪ್ರವೀಣ್ ನಾಯ್ಕ್,ವಿಕಾಸ್,ಮಂಜು ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.