Headlines

ತಾಳಗುಪ್ಪದಲ್ಲಿ ವಿದ್ಯುತ್ ಲೈನ್ ನಲ್ಲಿ ಬೆಂಕಿ : ಜನರಲ್ಲಿ ಹೆಚ್ಚಿದ ಆತಂಕ

ಸಾಗರ ತಾಲೂಕು ತಾಳಗುಪ್ಪದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಲೈನ್ ಮರಕ್ಕೆ ತಗುಲಿ ಬೆಂಕಿ ಹೊತ್ತುಕೊಂಡಿದೆ. ಸ್ವಲ್ಪ ಹೊತ್ತು ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಸ್ಪೋಟ ಸಂಭವಿಸಿದೆ.ಈ ಘಟನೆಯಿಂದ ಸುಮಾರು ಮನೆಯ ಟಿವಿ ಗಳು ಸುಟ್ಟು ಭಸ್ಮವಾಗಿದೆ.

ತಾಳಗುಪ್ಪದ ರಂಗಪ್ಪ ಗುಡ್ಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಕೆಪಿಟಿಸಿಎಲ್ ಮೂಲಕ ಇಲ್ಲಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಹೈಟೆನ್ಷನ್ ವಯರ್’ಗಳನ್ನು ಹಾಕಲಾಗಿದೆ. ಈ ಹೈಟೆನ್ಷನ್ ವಯರ್’ಗಳಿಗೆ ಅಕೇಷಿಯಾ ಮರಗಳು ತಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ತಿಳಿದು ಬಂದಿದೆ.

ಕೆಲವು ಹೊತ್ತು ಬೆಂಕಿ ರಭಸವಾಗಿ ಉರಿದಿದೆ. ಬಳಿಕ ಸ್ಪೋಟ ಸಂಭವಿಸಿದೆ. ರಂಗಪ್ಪ ಗುಡ್ಡ ಸುತ್ತಮುತ್ತಲ ಮನೆಗಳ ಜನರು ಇದರಿಂದ ಆತಂಕಕ್ಕೀಡಾಗಿದ್ದಾರೆ. 

ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.



Leave a Reply

Your email address will not be published. Required fields are marked *