Headlines

20 ವರ್ಷಗಳಿಂದ ದುರಸ್ತಿ ಕಾಣದೆ ಇರುವ ಗ್ರಾಮದ ಬಸ್ ನಿಲ್ದಾಣವನ್ನು ಯುವಕನೊಬ್ಬನಿಂದ ಸ್ವಚ್ಚ : ಯುವಕನ ಕಾರ್ಯಕ್ಕೆ ದಾರಿಹೋಕರಿಂದ ಶ್ಲಾಘನೆ :

ಸಾಗರ : 20 ವರ್ಷಗಳಿಂದ ಬಸ್ ಸ್ಟ್ಯಾಂಡ್ ಕಾಣದೆ ಇರುವ ಗ್ರಾಮದ ಬಸ್ ನಿಲ್ದಾಣವನ್ನು ಏಕ ವ್ಯಕ್ತಿಯಿಂದ ಸ್ವಚ್ಚ.ಯುವಕನ ಕಾರ್ಯಕ್ಕೆ ದಾರಿಹೋಕರಿಂದ ಶ್ಲಾಘನೆ.

ನಮ್ಮ ದೇಶ ಸ್ವಾತಂತ್ರ ಬಂದು ಅದೆಷ್ಟೋ ವರ್ಷ ಕಳೆದಿವೆ ಆದರೆ ಇನ್ನೂ ಕೂಡ ಕೆಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಬಸ್ ಸ್ಟ್ಯಾಂಡ್ ಇಲ್ಲದೆ ಸಾರ್ವಜನಿಕರು ಶಾಲೆಗೆ ಹೋಗು ಬರುವ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುತ್ತಿರುವುದನ್ನು ಕಂಡು ಇಲ್ಲೊಬ್ಬ ಯುವಕ ಬಸ್ ನಿಲ್ದಾಣವನ್ನು ಸ್ವಚ್ಚ ಮಾಡಿ ಇದೀಗ ಇತರ ಎಲ್ಲಾ ಯುವಕರಿಗಿಂತ ಮಾದರಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ನೇದರವಳ್ಳಿ ಗ್ರಾಮವು ಕಳೆದ 20 ವರ್ಷಗಳಿಂದ ನೂತನ ಬಸ್ ನಿಲ್ದಾಣವಿಲ್ಲದೆ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಕೂತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಹಾಗೂ ಹಳೆಯ ಬಸ್ ನಿಲ್ದಾಣ ವಾದ್ದರಿಂದ ಸ್ವಚ್ಚತೆಯೂ ಇಲ್ಲದೆ ಇರುವುದರಿಂದ ಹಳೆಯ ಬಸ್ ನಿಲ್ದಾಣದ ಒಳಗೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೋಗಲು ಹೆದರುವಂತಹ ಪರಿಸ್ಥಿತಿ ಉಂಟಾಗಿತ್ತು ಇದನ್ನು ಮನಗಂಡ  ನೇದರವಳ್ಳಿಯ ಯುವಕ  ಸಂದೇಶ (21) ವರ್ಷ ಇದೀಗ ಒಂಟಿ ಯಾಗಿ ಆ ಬಸ್ ನಿಲ್ದಾಣವನ್ನು ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಜಾಗವನ್ನು ಸ್ವಚ್ಛಗೊಳಿಸಿ ಪ್ರತಿದಿನ ಬೆಳಿಗ್ಗೆ 1ಕೊಡಪಾನ ನೀರಿನಲ್ಲಿ ಆ ಬಸ್ ಸ್ಟಾಂಡ್ ಒಳಗಡೆ ತೊಳೆದು ವಿದ್ಯಾರ್ಥಿಗಳಿಗೆ ಕೂರಲು  ಅನುಕೂಲವಾಗುವಂತೆ ಮಾಡಿ  ಇದೀಗ ಗ್ರಾಮಕ್ಕೆ ಮಾದರಿಯಾಗಿದ್ದಾರೆ.

ತಮ್ಮ ಅಕ್ಕಪಕ್ಕದ ಊರುಗಳಲ್ಲಿ ಶಾಸಕರ ಅಭಿವದ್ಧಿಯಲ್ಲಿ ಹಲವು ಬಸ್ ನಿಲ್ದಾಣಗಳು ಉನ್ನತ ವ್ಯವಸ್ಥೆಯಲ್ಲಿ ನಿರ್ಮಾಣವಾಗಿದೆ ಆದರೆ ನಮ್ಮ ನೇದರವಳ್ಳಿ ಗ್ರಾಮಕ್ಕೆ ಇದುವರೆಗೂ ಕೂಡ ಒಂದು ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ ಆದ್ದರಿಂದ ನಾನೇ ಸ್ವತಃ ಬಸ್ ನಿಲ್ದಾಣವನ್ನು ಹಾಗೂ ಸುತ್ತಮುತ್ತಲ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ವರದಿ: ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *