Headlines

ಸೂಡೂರು ಚೆಕ್ ಪೋಸ್ಟ್ ಬಳಿಯೇ ಲಕ್ಷಾಂತರ ಬೆಲೆಬಾಳುವ ಸಾಗುವಾನಿ ಮರಗಳು ಕಳವು:

ರಿಪ್ಪನ್ ಪೇಟೆ : ಅಕ್ರಮವಾಗಿ ಬೃಹದಾಕಾರದ ಸಾಗುವಾನಿ ಮರಗಳನ್ನು ಕಡಿದು ಕಳ್ಳತನ
ಮಾಡಿರುವ ಘಟನೆ ಸೂಡೂರು ಅರಣ್ಯ ಚೆಕ್ ಪೋಸ್ಟ್ ಬಳಿ ನಡೆದಿದೆ.


 ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೂಡೂರು ಮುಖ್ಯ
ರಸ್ತೆಯ ಬಳಿ ಹಾಗೂ ಸೂಡೂರು ಅರಣ್ಯ ಇಲಾಖೆ ಚೆಕ್ ಪೋಸ್ಟ್ ನ ಕೂಗಳತೆಯ ದೂರದಲ್ಲಿ
ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಮರಗಳ್ಳರು ಅಕ್ರಮ ಪ್ರವೇಶ
ಮಾಡಿ ಲಕ್ಷಾಂತರ ರೂ ಬೆಲೆಬಾಳುವ ಸಾಗುವನಿ ಮರಗಳನ್ನು ಕಡಿದು ಮರದ ತುಂಡುಗಳನ್ನು ಅಕ್ರಮ
ಸಾಗಾಟ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.
ರಸ್ತೆ ಬದಿಯಲ್ಲಿಯೇ ಈ ಕಳ್ಳತನ ನಡೆದಿದ್ದು, ಸುಮಾರು ಮೂರು ಬೃಹತ್ ಗಾತ್ರದ ಮರಗಳನ್ನು
ಕಡಿದು ಹಾಡಹಗಲೇ ಮರದ ತುಂಡುಗಳನ್ನು ಸಾಗಿಸಿರುವ ಘಟನೆ ನಡೆದಿದೆ.

ಇಂತಹ ಘಟನೆಗಳಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನವೇ ನೇರ ಕಾರಣವೆಂದು ಸ್ಥಳೀಯ ಗ್ರಾಮಸ್ಥರು
ಆರೋಪಿಸಿದ್ದಾರೆ. ಹಳ್ಳಿಗಾಡು ಪ್ರದೇಶಗಳಲ್ಲಿ  ವಾಸಿಸುವ ರೈತರು ಸೊಪ್ಪು, ದರಗಲು
ಎಲೆಗಳನ್ನು  ತಂದು ಜಾನುವಾರುಗಳಿಗೆ,ಕೊಟ್ಟಿಗೆಗಳಿಗೆ ಹಾಕಿ ಗೊಬ್ಬರವನ್ನು
ತಯಾರಿಸುವುದು ರೂಡಿಯಾಗಿದ್ದು ಆದರೆ ಕ್ಷುಲ್ಲಕ ಕಾರಣಗಳನ್ನು ನೆಪವೊಡ್ಡಿ ರೈತರಿಗೆ ಅರಣ್ಯ
ಪ್ರವೇಶ ಮಾಡದಂತೆ ಹಾಗೂ ಸೊಪ್ಪುಗಳನ್ನು ತರದಂತೆ ತಾಕಿತು ಮಾಡುವ ಅರಣ್ಯ ಇಲಾಖೆಯ
ಅಧಿಕಾರಿಗಳು, ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಹಾಡಹಗಲೇ ರಾಜಾರೋಷವಾಗಿ ಕಳ್ಳತನ ಮಾಡಿದರೆ
ತುಟಿ ಪಿಟಿಕ್ ಎನ್ನದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಸಂಬಂಧ ಅರಣ್ಯ ಇಲಾಖೆಯು ಆಯನೂರಿನ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ
ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹಳ್ಳಿಗಾಡಿನಲ್ಲಿ ರೈತಾಪಿ ಜನಗಳು ಕೃಷಿ ಉದ್ದೇಶಕ್ಕೆ ಸೊಪ್ಪು ಕಡಿದರೆ
ಅನಗತ್ಯ ದೂರುಗಳನ್ನು ದಾಖಲಿಸಿ ಕಿರುಕುಳ ಕೊಡುವ ಅರಣ್ಯ ಇಲಾಖೆಯ ಅಧಿಕಾರಿಗಳು ರಾಜಾರೋಷವಾಗಿ
ರಸ್ತೆ ಬದಿಯಲ್ಲಿಯೇ ಮರಗಳ್ಳರು ಲಕ್ಷಾಂತರ ಬೆಲೆಬಾಳುವ ಮರ ಕಡಿದಾಗ ಮೌನಕ್ಕೆ ಜಾರುವುದು
ಬೇಸರದ ಸಂಗತಿಯಾಗಿದೆ.








Leave a Reply

Your email address will not be published. Required fields are marked *