ರಿಪ್ಪನ್ ಪೇಟೆ : ಪಟ್ಟಣದ ಬಹು ನಿರೀಕ್ಷಿತ ಬಸ್ ನಿಲ್ದಾಣಕ್ಕೆ ಸರ್ವೇ ನಂ 329 ರಲ್ಲಿ 1962 ರ ಸಾಲಿನಲ್ಲಿಯೇ ಮೀಸಲಿಟ್ಟು ಗ್ರಾಮ ಪಂಚಾಯತಿಯಲ್ಲಿ ನಿರ್ಣಯಿಸಲಾಗಿದೆ.ಬಸ್ ನಿಲ್ದಾಣದ ಸಂಬಂಧ ಅನೇಕ ಹೋರಾಟಗಳು ನಡೆದಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಈಗ ಗ್ರಾಮ ಪಂಚಾಯತ್ ಅನ್ಯ ಉದ್ದೇಶಗಳ ಬಳಕೆಗೆ ಈ ಸ್ಥಳದಲ್ಲಿ ಅವಕಾಶ ನೀಡದೇ ಪಟ್ಟಣದ ಹೃದಯ ಭಾಗದಲ್ಲೆ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಹೊಸನಗರ ತಾಲೂಕ್ ಜನಪರ ವೇದಿಕೆ ಅಧ್ಯಕ್ಷರಾದ ಆರ್ ಎನ್ ಮಂಜುನಾಥ್ ಆಗ್ರಹಿಸಿದ್ದಾರೆ.
ಬಸ್ ನಿಲ್ದಾಣದಲ್ಲಿರುವ ಅಕ್ರಮ ಕಟ್ಟಡ ತೆರವಿಗೂ ಸಹ ಅನೇಕ ಹೋರಾಟ ನಡೆದಿದೆ.ತೆರವಿಗೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು ಕಾರಾಣಾಂತರಗಳಿಂದ ತೆರವು ಕಾರ್ಯಾಚರಣೆ ಕುಠಿತಗೊಂಡಿತ್ತು.
ಆದ್ದರಿಂದ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಯಾವುದೇ ಅನ್ಯ ಉದ್ದೇಶಕ್ಕೆ ಈ ಸರ್ವೇ ನಂಬರ್ ನಲ್ಲಿ ಅನುಮತಿ ನೀಡದೇ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ರಿಪ್ಪನ್ ಪೇಟೆಯ ಜನತೆಯ ಬಹುದಿನಗಳ ಕನಸಾದ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಬೇಕೆಂದು ಹೊಸನಗರ ಜನಪರ ವೇದಿಕೆ ಹೋರಾಟ ಸಮಿತಿ ಅಧ್ಯಕ್ಷರಾದ ಆರ್ ಎನ್ ಮಂಜುನಾಥ್ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುಳಾ ಕೇತಾರ್ಜಿರಾವ್ ರವರಿಗೆ ಮನವಿ ಮಾಡಿದ್ದಾರೆ.