Headlines

ರಿಪ್ಪನ್ ಪೇಟೆ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಸುಗೂಸು : ಸಹಾಯಕ್ಕಾಗಿ ಯಾಚನೆ

ರಿಪ್ಪನ್ ಪೇಟೆ :ಪಟ್ಟಣದ ತೀರ್ಥಹಳ್ಳಿ ರಸ್ತೆ ಶಬರೀಶನಗರ ನಿವಾಸಿ ಭರತ್ ಹಾಗು ಶ್ವೇತ ದಂಪತಿಯ ಏಳು ತಿಂಗಳಿಗೆ ಜನಿಸಿದ ಹಸುಗೂಸು ಉಸಿರಾಟದ ಸಮಸ್ಯೆಯಿಂದ ಸಾವು ಬದುಕಿನ ಮದ್ಯೆ ಹೋರಾಡುತ್ತಿದೆ. ಸದ್ಯ ಮಗುವಿಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಲಕ್ಷಾಂತರ ರೂ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.ಉಸಿರಾಟದ ತೊಂದರೆ, ಸೆಳವು ಅಥವಾ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಅಸಮರ್ಥತೆಯ ಮತ್ತು ಮೆದುಳಿನಲ್ಲಿ ನೀರು ತುಂಬಿಕೊಂಡಿರುವ ತೊಂದರೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದೆ.


ಈ ಕುಟುಂಬದಲ್ಲಿ  ಲಕ್ಷಾಂತರ ವೆಚ್ಚ ಪಾವತಿಸಲು ಆರ್ಥಿಕವಾಗಿ ಬಲಹೀನರಾಗಿದ್ದಾರೆ.ಸಹೃದಯಿ ದಾನಿಗಳು ಈ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ನೆರವಾದಿತು ಮಾತ್ರವಲ್ಲ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ಸಾಧ್ಯವಿದೆ.ಯಾರಾದರೂ ದಾನಿಗಳು ಸಹಾಯಕ್ಕೆ ಮುಂದಾದರೆ ಸಾಕು ಅನ್ನುವಂಥ ಪರಿಸ್ಥಿತಿಯಲ್ಲಿ ಈ ಕುಟುಂಬ ಈಗ ಪರಿತಪಿಸುತ್ತಿದೆ.ಜನಪ್ರತಿನಿಧಿಗಳು ಹಾಗೂ ನೆರೆಹೊರೆಯವರು ಸಾವು ಬದುಕಿನ ಮದ್ಯ ಹೋರಾಡುತ್ತಿರುವ ಮಗುವಿಗೆ ನೆರವಾಗಬೇಕು ಎಂದು ಈ ಕುಟುಂಬ ಸಹಾಯ ಯಾಚಿಸುತ್ತಿದೆ.

ಭರತ್ ಅವರ ತಂದೆ ಶಬರೀಶ ನಗರ ವಾಸಿ ಗಣೇಶ್ (ಗಣಿ) ಇವರು ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ಹೋಮ್ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಾರಾದರೂ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವವರು ಈ ಖಾತೆ ಸಂಖ್ಯೆ ಹಾಗೂ ಗೂಗಲ್ ಪೇ ಸಂಖ್ಯೆಯನ್ನು ಸಂಪರ್ಕಿಸಿ.ತಮ್ಮ ಕೈಲಾದ ಸಹಾಯ ಮಾಡಿ

ಹೆಸರು -ಭರತ್ 
ಕೆನರಾ ಬ್ಯಾಂಕ್ ಖಾತೆ ನಂ : 0534119019211
IFSC ಕೋಡ್ -CNRB0000534
ಬ್ರಾಂಚ್ -ರಿಪ್ಪನ್ ಪೇಟೆ

ಫೋನ್ ಪೇ/ ಗೂಗಲ್ ಪೇ -8971421052

ಹೆಚ್ಚಿನ ಮಾಹಿತಿಗೆ ಈ ನಂಬರ್ ಗೆ ಕರೆ ಮಾಡಿ : 8971421052


Leave a Reply

Your email address will not be published. Required fields are marked *