ಅರ್ಧ ಲಕ್ಷ ರೂ. ದಾಟಿದ ಕೆಂಪಡಕೆ ದರ, ಹಬ್ಬಕ್ಕೂ ಮುನ್ನ ಅಡಕೆ ಬೆಳೆಗಾರರಿಗೆ ಭರ್ಜರಿ ಗಿಫ್ಟ್‌!

ಶಿವಮೊಗ್ಗ : ನಗರದ ಅಡಿಕೆ ಮಾರುಕಟ್ಟೆಯಲ್ಲಿ ಕೆಂಪಡಿಕೆ ಶುಕ್ರವಾರ ಪ್ರತಿ ಕ್ವಿಂಟಲ್‍ಗೆ ಸರಾಸರಿ ₹51 ಸಾವಿರ ದರ ಕಂಡಿದೆ. ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಅಡಿಕೆ ದರ ಗಗನಮುಖಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಹೆಚ್ಚಿದ ದರದಿಂದಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿ ಅಡಿಕೆ ಮಾರುಕಟ್ಟೆಯಲ್ಲಿ ಆವಕ ಹೆಚ್ಚುತ್ತಿದೆ.
ಅತೀ ಹೆಚ್ಚು ಅಡಿಕೆ ಬೆಳೆಯುವ ಹೊಸನಗರ,ತೀರ್ಥಹಳ್ಳಿ, ಸಾಗರ ಬಾಗದ ರೈತರ ಮನೆಯಲ್ಲಿ ಹಬ್ಬದ ವಾತಾವರಣವಾಗಿದೆ.
ಕಳೆದ ಕೆಲ ತಿಂಗಳಿನಿಂದ ₹40 ಸಾವಿರ ಆಸುಪಾಸಿನಲ್ಲಿ ಅಡಿಕೆ ಖರೀದಿ ಆಗುತ್ತಿತ್ತು. ನಾಲ್ಕು ದಿನಗಳ ಹಿಂದೆ ₹45 ಸಾವಿರ ದಾಟಿದ್ದ ದರ ಈಗ ಅರ್ಧ ಲಕ್ಷ ಬೆಲೆಗೆ ತಲುಪಿದೆ. ಇದು ಎರಡು ವರ್ಷಗಳಲ್ಲಿ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕೆಂಪಡಿಕೆ ಕಂಡ ದಾಖಲೆಯ ದರವಾಗಿದೆ. ಚಾಲಿ ಅಡಿಕೆ ದರವೂ ಸರಾಸರಿ ₹43 ಸಾವಿರಕ್ಕೆ ಏರಿಕೆಯಾಗಿದೆ.

ಸಂತಸದ ಸಂಗತಿ ಎಂದರೆ ರಾಜ್ಯದಲ್ಲೇ ಅತಿ ದೊಡ್ಡ ಅಡಿಕೆ ಮಾರುಕಟ್ಟೆ ಶಿವಮೊಗ್ಗದಲ್ಲಿ ರಾಜ್ಯದ ಬೇರಾವ ಅಡಿಕೆ ಮಾರುಕಟ್ಟೆಗಿಂತಲೂ ಅಧಿಕ ಧಾರಣೆ ಸಿಗುತ್ತಿದೆ.

ಕಾರಣವೇನು?: ಕಳ್ಳ ಮಾರ್ಗದಲ್ಲಿ ಬರುತ್ತಿದ್ದ ವಿದೇಶಿ ಅಡಿಕೆಗೆ ಈಗ ಕಡಿವಾಣ ಬಿದ್ದಿರುವುದರಿಂದ ದೇಸಿ ಅಡಿಕೆಗೆ ಭಾರಿ ಬೇಡಿಕೆ ಬಂದಿದೆ. ಸಹಜವಾಗಿ ಧಾರಣೆ ಏರಿಕೆಗೆ ಕಾರಣವಾಗಿದೆ. ಮತ್ತೊಂದು ಕಡೆ ಅಡಿಕೆಗೆ ತಗುಲಿದ ಕೊಳೆ, ಹಳದಿ ಎಲೆ ಮತ್ತು ಇತರೆ ರೋಗಗಳಿಂದಾಗಿ ಉತ್ಪಾದನೆ ಕುಸಿತವಾಗಿ ಬೇಡಿಕೆ ಹೆಚ್ಚಾಗಿದೆ ಎಂದು ಕೆಲವರು ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಅಡಿಕೆಗೆ ಸುಗ್ಗಿ ಕಾಲದಲ್ಲೇ ಉತ್ತಮ ಧಾರಣೆ ಇರುವುದು ನಮ್ಮ ರೈತರಲ್ಲಿ ಸಂತಸ ಮೂಡಿಸಿದೆ. ಈಗಿನ ವ್ಯಾಪಾರದ ಸ್ಥಿತಿಗತಿ ನೋಡಿದಾಗ ಧಾರಣೆ ಗ್ರಾಫ್‌ ಏರುಮುಖವಾಗಿಯೇ ಇರುವ ಸಾಧ್ಯತೆ ಇದೆ. ಹೀಗಾಗಿ ಮಲೆನಾಡಿನ ರೈತರು ಬಹಳ ಉತ್ಸಾಹದಿಂದ ಅಡಿಕೆ ಕೊಯ್ಲು ಆರಂಭಿಸುವ ಸಿದ್ಧತೆಯಲ್ಲಿದ್ದಾರೆ’


ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದ ಸಂಚಲನ ಮೂಡಿಸಿರುವ ಕೆಂಪಡಕೆ ಟೆಂಡರ್‌ ದರ ಶುಕ್ರವಾರ ಕ್ವಿಂಟಾಲ್‌ಗೆ ಅರ್ಧ ಲಕ್ಷ ರೂ. ದಾಟಿದೆ. ಇಲ್ಲಿಯ ಅಡಕೆ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ಟೆಂಡರ್‌ ಪ್ರಕ್ರಿಯೆಯಲ್ಲಿ ಕೆಂಪಡಕೆಗೆ ಗರಿಷ್ಠ 51,500 ಮತ್ತು ಯಲ್ಲಾಪುರದಲ್ಲಿ 53,500 ರೂ. ನಮೂದಾಗಿದೆ. ಅದರಲ್ಲೂ ಒಂದೇ ದಿನದ ಅವಧಿಯಲ್ಲಿ ಕ್ವಿಂಟಾಲ್‌ಗೆ ಮೂರು ಸಾವಿರ ರೂ. ಹೆಚ್ಚಳ ಆಗಿದ್ದು ಹೊಸ ದಾಖಲೆಯಾಗಿದೆ.


ಇದರಿಂದ ಕಳೆದ ಕೆಲ ವರ್ಷಗಳಲ್ಲಿ ಕೆಂಪಡಕೆಗೆ ಗರಿಷ್ಠ ಮೊತ್ತ ಲಭ್ಯವಾದ ದಾಖಲೆ ನಿರ್ಮಾಣವಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಕೆಂಪಡಕೆ ದರ ಕ್ವಿಂಟಲ್‌ಗೆ ಸರಾಸರಿ 40 ಸಾವಿರ ರೂ. ಮತ್ತು ಗರಿಷ್ಠ 42 ಸಾವಿರ ರೂ.ಗಳಿಗೆ ಮಾರುಕಟ್ಟೆಯಲ್ಲಿ ವಿಕ್ರಿ ಆಗುತ್ತಿತ್ತು. ಆದರೆ ಪ್ರಸ್ತುತ ಹದಿನೈದು ದಿನಗಳ ಈಚೆಗೆ ಹಂತಹಂತವಾಗಿ ಏರುತ್ತಿರುವ ದರ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಮೂಡಿಸಿದೆ. ಗುರುವಾರ ಗರಿಷ್ಠ ದರ 48,500 ಇದ್ದರೆ ಶುಕ್ರವಾರ ಮತ್ತೆ ಮೂರು ಸಾವಿರ ರೂ.ಹೆಚ್ಚಳವಾಗಿದ್ದು 50,000 ರೂ. ಗಡಿ ದಾಟಿದೆ.
ಇದು ಕಳೆದ ಎರಡು ವರ್ಷಗಳ ಇದೇ ಅವಧಿಯ ದರ ಗಮನಿಸಿದರೆ ದಾಖಲೆಯ ದರವಾಗಿದೆ. ಆಯಾ ಪ್ರದೇಶದ ಅಡಕೆ ಗುಣಮಟ್ಟಕ್ಕೆ ಅನುಗುಣವಾಗಿ ದರ 3 ರಿಂದ 4 ಸಾವಿರ ವ್ಯತ್ಯಾಸ ಇರುತ್ತದೆ. ಅಂದರೆ ಈಗಾಗಲೇ 50 ಸಾವಿರ ರೂ.ಗಳನ್ನು ದಾಟಿರುವ ಶಿವಮೊಗ್ಗ ಮಾರುಕಟ್ಟೆ ದರ ಈಗ 50 ಸಾವಿರ ರೂ.ದಾಟಿರುವ ಶಿರಸಿಯ ಕೆಂಪಡಕೆ ದರಕ್ಕೆ ಬಹುತೇಕ ಸಮನಾಗಿದೆ ಎಂಬುದಾಗಿ ಸ್ಥಳೀಯ ವ್ಯಾಪಾರಸ್ಥರು ಹೇಳುತ್ತಾರೆ.


ಪ್ರಮುಖ ಪ್ರಕಾರಗಳಾದ ಕೆಂಪಡಕೆ ಮತ್ತು ಚಾಲಿ ಅಡಕೆ ದರ ಕಳೆದ ಎರಡು ವರ್ಷಗಳ ಈಚೆಗೆ ಬಹುತೇಕ ಸ್ಥಿರವಾಗಿದೆ. ಕಳೆದ ಎರಡು ದಶಕಗಳಲ್ಲಿ ಬಹಳಷ್ಟು ಏರಿಳಿತ ಕಂಡಿದ್ದ ಅಡಕೆ ಮಾರುಕಟ್ಟೆ ಹೀಗೆ ಉತ್ತಮ ದರದೊಂದಿಗೆ ಮುನ್ನಡೆದಿರುವುದು ಕೃಷಿಕರಲ್ಲಿ ನೆಮ್ಮದಿ ಮೂಡಿಸಿದೆ.

ಅದರಲ್ಲೂ ಕಳೆದ ಒಂದೂವರೆ ವರ್ಷದಿಂದ ಮಾರುಕಟ್ಟೆ ಸಹಿತ ಜನಜೀವನ ತಲ್ಲಣಗೊಳಿಸಿರುವ ಕೋವಿಡ್‌ ಸೋಂಕು ಪರಿಣಾಮ ಅಡಕೆ ಮಾರುಕಟ್ಟೆ ಮೇಲೆ ಅಷ್ಟಾಗಿ ಆಗಿಲ್ಲ ಎಂಬುದು ಬೆಳೆಗಾರರು ನಿಟ್ಟುಸಿರು ಬಿಡುವಂತೆ ಮಾಡುತ್ತಿದೆ.

ಇದೇ ಸಂದರ್ಭದಲ್ಲಿ ವಿದೇಶಗಳಿಂದ ಅಕ್ರಮವಾಗಿ ಅಡಕೆ ಆಮದು ಮಾಡಿಕೊಳ್ಳುತ್ತಿರುವುದು ಕೋವಿಡ್‌ ನಿರ್ಬಂಧಗಳ ಕಾರಣದಿಂದ ಬಹುತೇಕ ಕಡಿವಾಣ ಹಾಕಿದ್ದು ಕೂಡ ಅಡಕೆ ದರ ಸ್ಥಿರತೆಗೆ ಕಾರಣವಾಗಿದೆ ಎಂದು ವ್ಯಾಪಾರಿ ಮೂಲಗಳು ತಿಳಿಸುತ್ತವೆ.

(ಕ್ವಿಂಟಲ್‌ಗೆ ಕನಿಷ್ಠ -ಗರಿಷ್ಠ)

ಆಗಸ್ಟ್‌ 7: 39600-41500

ಆಗಸ್ಟ್‌ 22: 41700-44300

ಆಗಸ್ಟ್‌ 28: 41900-45800

ಸಪ್ಟೆಂಬರ್‌ 1: 43500-47100

ಸೆಪ್ಟೆಂಬರ್‌ 3: ಗರಿಷ್ಠ 53,500

Leave a Reply

Your email address will not be published. Required fields are marked *