ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು :ಮಳಲಿ ಶ್ರೀ

ರಿಪ್ಪನ್ ಪೇಟೆ:ನಾನು ನನ್ನದು ಎಂಬುದಕ್ಕಿಂತ ನಾವು ನಮ್ಮದು ಎಂಬ ಮನೋಭಾವ ಇದ್ದಾಗ ಮಾತ್ರ ಬೆಳೆಯಲಿಕ್ಕೆ ಸಾದ್ಯ ಎಂದು ಮಳಲಿಮಠದ .ಡಾ.ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಬುಧವಾರ ಹೊಸನಗರ ತಾಲೂಕಿನ ಮಸರೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ. ಶ್ರಾವಣ ಮಾಸದ ಅಂಗವಾಗಿ  ಹಮ್ಮಿಕೊಂಡ. ವಿಶೇಷ ರುದ್ರಾಭಿಷೇಕ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ  ಅವರು . ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು. ನಾನು ನನ್ನಿಂದಲೆ ಎಂಬ ಅಹಂಕಾರವನ್ನು ಬಿಡಬೇಕು ಎಂದರು.

 ದೇವರಲ್ಲಿ ನಂಬಿಕೆ ಪ್ರೀತಿ-ವಿಶ್ವಾಸ ಶಾಂತಿ ಇವುಗಳು ಮಾನವನ ನೆಮ್ಮದಿಯ ಜೀವನಕ್ಕೆ ಮೂಲಭೂತ ಮತ್ತು ಅವಶ್ಯಕವಾದ ಅಂಶಗಳಾಗಿವೆ. ಇಂದಿನ ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಬದುಕು ಸಾಗಿಸುತ್ತಿರುವ ಪ್ರತಿಯೊಬ್ಬರೂ ಒತ್ತಡಗಳಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಪ್ರತಿಯೊಬ್ಬರು ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕಾದರೆ ಧಾರ್ಮಿಕ ಆಚರಣೆಗಳನ್ನು ಕ್ರಮಬದ್ಧವಾಗಿ ಆಚರಿಸಬೇಕು ಮತ್ತು ಪಾಲಿಸಬೇಕು.

 ಆದಷ್ಟು ಬೇಗ ಜಗತ್ತನ್ನು ತಲ್ಲಣಗೊಳಿಸಿದ ಈ ಕರೋನ ಮಹಾಮಾರಿ ತೊಲಗಿ ನಾಡಿಗೆ ಶುಭತರಲಿ ಎಂದು ನುಡಿದರು.

 ಈ ಕಾರ್ಯಕ್ರಮದಲ್ಲಿ ಮುರುಗೇಶಪ್ಪಗೌಡ.ಪುಟ್ಟಸ್ವಾಮಿಗೌಡ್ರು. ಶಾಂತವೀರಪ್ಪಗೌಡರು. ಅರ್ಚಕರಾದ ರಾಚಪ್ಪ. ಶಿವಾನಂದಪ್ಪ. ಸೇರಿದಂತೆ ಇತರರು ಉಪಸ್ಥಿತಿ ಇದ್ದರು. ಗಣೇಶ್ ಕೆಂಚನಾಲ್ ಸ್ವಾಗತಿಸಿ. ಮಧುಕುಮಾರ ವಂದಿಸಿದರು.



ವರದಿ : ಸಬಾಸ್ಟಿನ್ ಮ್ಯಾಥ್ಯೂಸ್‌ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *