ಹಿರೇಮನೆ ಗಿರಿಜನ ಆಶ್ರಮ ಶಾಲೆ ಹೆಸರು ಬದಲಾವಣೆಗೆ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ವಿರೋಧ

ಸಾಗರ :ತಾಲ್ಲೂಕಿನ ತಾಳಗುಪ್ಪ ಹೋಬಳಿ ಹಿರೇಮನೆಯಲ್ಲಿ 50 ವರ್ಷಗಳ  ಹಿಂದೆ ಪ್ರಾರಂಭಗೊಂಡ ಮಹಾತ್ಮಾಗಾಂಧಿ ಗಿರಿಜನ ಆಶ್ರಮ ಶಾಲೆ ಈ ಹೆಸರನ್ನು ಸರ್ಕಾರ ಏಕಾಏಕಿ ವಾಲ್ಮೀಕಿ ಆಶ್ರಮ ಶಾಲೆ ಎಂದು ಮರು ನಾಮಕರಣ ಮಾಡಿರುವ ಕ್ರಮವನ್ನು  ವಿರೋಧಿಸಿ ಕರ್ನಾಟಕ ಅರಣ್ಯ  ಮೂಲ ಬುಡಕಟ್ಟುಗಳ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕ ಇಂದು ಸಾಗರ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು. 

 ಸರ್ಕಾರದ ಈ ನೀತಿಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡರಾದ ಪರಮೇಶ್ವರ ದೂಗೂರು     ಮಾತನಾಡಿ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮನಬಂದಂತೆ ನಡೆದುಕೊಳ್ಳುತ್ತಿದೆ ತಕ್ಷಣ ಈ ಆದೇಶವನ್ನು ಹಿಂಪಡೆದು ಹಿಂದಿರುವ ಹೆಸರನ್ನೇ ಮುಂದುವರಿಸಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ತಿಳಿಸಿದರು 

    ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ದ ರಾಜ್ಯ ಸಂಚಾಲಕ ರಾಮಣ್ಣ ಹಸಲರು. ಜಿಲ್ಲಾ ಸಮಿತಿಯ ಸಂಚಾಲಕರಾದ ಲಕ್ಷ್ಮಮ್ಮ ಹಿರೇಮನೆ. ರವಿ ಜಂಬಗಾರು.     ಸುಮಂಗಲಾ.ಈಶ್ವರ. ಕಮಲಾಕ್ಷಿ. ನಾಗರತ್ನ .ಮುಂತಾದವರು ಭಾಗವಹಿಸಿದ್ದರು.



ವರದಿ: ಧರ್ಮರಾಜ್ ಜಿ ಸಾಗರ
ಮೊ: 9739577082




ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *