ಸಾಗರ : ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯ್ತಿಯ ನೇದರವಳ್ಳಿಯಲ್ಲಿ ಸರ್ವೆ ನಂಬರ್ 10 ಮತ್ತು 11 ರಲ್ಲಿ 43ಎಕರೆ ಸೊಪ್ಪಿನ ಬೆಟ್ಟದಲ್ಲಿ ತೋಟಕ್ಕೆ ಮುಫತ್ತು ಎಂದು ಕಾಡು ಇತ್ತು.
ಆದರೆ ಇತ್ತೀಚಿನ ಹತ್ತು ವರ್ಷದ ಈ ಕಡೆ ನೇದರವಳ್ಳಿ ಗ್ರಾಮದ 20 ಕ್ಕೂ ಹೆಚ್ಚು ಜನ ಈ ಕಾಡನ್ನು ಇದೀಗ ಒತ್ತುವರಿ ಮಾಡಿದ್ದಾರೆ ಟ್ರಂಚ್ ಹೊಡೆಸಿದ್ದಾರೆ ಹಾಗೂ ಬೆಳೆಯನ್ನು ಸಹ ಮಾಡಿದ್ದಾರೆ.
ಹಾಗೂ ಕಾಡಿನ ಜಾಗದಲ್ಲಿ ಇದೀಗ ಕ್ರಿಕೆಟ್ ಮೈದಾನವನ್ನು ಮಾಡಿದ್ದು ಇದಕ್ಕೆ ಅವಕಾಶವನ್ನು ನೀಡಿದವರು ಯಾರು ಹಾಗೂ 20 ಅಡಿಯಷ್ಟು ಮಣ್ಣನ್ನು ತೆಗೆದು ಗಣಿಗಾರಿಕೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕಾಡಿನಲ್ಲಿ ಬೆಳಿಗ್ಗೆ ಇದ್ದ ಮರಗಳು ಈಗ ರಾತ್ರಿ ಕಾಣುತ್ತಿಲ್ಲ ಬೆಲೆಬಾಳುವಂತಹ ಮರಗಳನ್ನು ಕಡಿಯುತ್ತಿದ್ದಾರೆ ಹಾಗಾದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ವಿಚಾರದಲ್ಲಿ ಸುಮ್ಮನಿರುವುದು ನೋಡಿದರೆ ಅವರು ಸಹ ಶಾಮೀಲಾಗಿರುವ ಶಂಕೆ ಎದ್ದು ತೋರುತ್ತಿದೆ ಎಂದು ಅರಣ್ಯ ಇಲಾಖೆಯವರ ಮೇಲೂ ಸಹ ಆರೋಪಿಸಿದರು.
ಈಗ 5 ರಿಂದ 6 ಎಕರೆ ಸೊಪ್ಪಿನ ಬೆಟ್ಟದಲ್ಲಿ ಖಾಲಿ ಜಾಗವಿದ್ದು ಆ ಜಾಗದಲ್ಲಿ ನಾನು ಕಾಡು ಮರಗಳನ್ನು ಬೆಳೆಸಲು ಹೊರಟರೆ ಅಧಿಕಾರಿಗಳು ನನಗೆ ಜೀವ ಬೆದರಿಕೆಯನ್ನೂ ಹಾಕುತ್ತಾರೆ.
ಸೊಪ್ಪಿನ ಬೆಟ್ಟದ ಕಾಡನ್ನು ದಯಮಾಡಿ ಇನ್ನಾದರೂ ಉಳಿಸಿ ಮುಂದಿನ ಪೀಳಿಗೆಗೆ ನೋಡಬೇಕೆಂದರೂ ವಿಶಿಷ್ಟ ಮರಗಳು ಸಿಗುವುದಿಲ್ಲ ಹಾಗಾಗಿ ಇನ್ನಾದರೂ ರಕ್ಷಿಸಬೇಕು ಎಂಬುದು ನನ್ನ ಆಶಯ.
ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಇದರ ಬಗ್ಗೆ ಕ್ರಮ ಕೈಗೊಂಡು ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಕಾಡನ್ನು ರಕ್ಷಿಸುವತ್ತ ಗಮನಹರಿಸಬೇಕು ಎಂದು ಮನವಿ ಮಾಡಿದರು.
ವರದಿ: ಪವನ್ ಕುಮಾರ್ ಕಠಾರೆ