Headlines

ಬೇಳೂರು ಗೋಪಾಲಕೃಷ್ಣ ಬಿಜೆಪಿ ಸರ್ಕಾರ ಪತನದ ಬಗ್ಗೆ ಹಗಲುಕನಸು ಕಾಣುತ್ತಿದ್ದಾರೆ : ಸಚಿವ ಶಿವರಾಂ ಹೆಬ್ಬಾರ್


ಶಿರಸಿ : ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರ ಬೀಳುವ ಕುರಿತು ಸ್ವಪ್ನ ಬಿದ್ದಿರಬೇಕು. ಆದರೆ ಯಾವುದೇ ಕಾರಣಕ್ಕೂ ಒಂದು ದಿನ ಮುಂಚಿತವಾಗಿಯೂ ಸರ್ಕಾರ ಪತನವಾಗಲ್ಲ.ಬಿಜೆಪಿ ಸರ್ಕಾರ ಅವಧಿ ಪೂರೈಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.‌

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಪಾಲಕೃಷ್ಣ ಅವರಿಗೆ ಅಧಿಕಾರ ಇಲ್ಲದೇ ಇರುವುದರಿಂದ ಶೀಘ್ರದಲ್ಲಿ ಚುನಾವಣೆಗೆ ಹೋಗಬೇಕಾಗಿದೆ. ಆದ ಕಾರಣ ಹತಾಶರಾಗಿ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಅವರ ಸರ್ಕಾರ ಪತನ ಹೇಳಿಕೆಗೆ ತಿರುಗೇಟು ನೀಡಿದರು.

119 ಶಾಸಕರನ್ನು ಹೊಂದಿರುವ ಸರ್ಕಾರ ಇದಾಗಿದೆ. ಇದು ಗ್ರಾಮ ಪಂಚಾಯತ್ ಅಲ್ಲ. ಯಾರಾದರೂ ಸರ್ಕಾರ ಬೀಳುವ ಆಲೋಚನೆಯಲ್ಲಿ ಇದ್ದರೆ ಅದು ಕೇವಲ ಭ್ರಮೆ ಮಾತ್ರ. ಆ ಭ್ರಮೆಯಲ್ಲಿಯೇ ಇನ್ನೂ ಒಂದು ವರ್ಷ ದಿನ ದೂಡಬೇಕಾಗುತ್ತದೆ ಎಂದು ಟೀಕಿಸಿದರು.

ಇಂದಿನಿಂದ  ಪ್ರೌಢಶಾಲೆಗಳು ಆರಂಭವಾಗಿದೆ. ಈಗಾಗಲೇ ಅನೇಕ ಶಾಲೆಗೆ ಭೇಟಿ ನೀಡಿದ್ದೇನೆ. ಮಕ್ಕಳು ಉತ್ಸಾಹದಿಂದ, ಏನೋ ಕಳೆದುಕೊಂಡಿದ್ದು ಸಿಕ್ಕಿದೆ ಎಂಬ ಆಶಯದಲ್ಲಿ ಶಾಲೆಗೆ ಬಂದಿದ್ದಾರೆ. ಪರಿಸ್ಥಿತಿ ನೋಡಿ ಉಳಿದ ಮಕ್ಕಳಿಗೂ ಶಾಲೆಗೆ ಬರಲು ಅನುಕೂಲ ಆಗುವ ನಿರ್ಧಾರ ಕೈಗೊಳ್ಳಲಿದ್ದೇವೆ  ಎಂದರು.‌

Leave a Reply

Your email address will not be published. Required fields are marked *