w
Headlines
Home » ಶಿವಮೊಗ್ಗ: ಆಡುತ್ತಿದ್ದ ಬಾಲಕನಿಗೆ ಉರುಳಾದ ಜೋಕಾಲಿ :

ಶಿವಮೊಗ್ಗ: ಆಡುತ್ತಿದ್ದ ಬಾಲಕನಿಗೆ ಉರುಳಾದ ಜೋಕಾಲಿ :

ಶಿವಮೊಗ್ಗ: ಜೋಕಾಲಿ ಆಡುವಾಗ ಸೀರೆ ಉರುಳಾಗಿ ಭರತ್ ಎಂಬ ಬಾಲಕ ಮೃತಪಟ್ಟಿರುವ ಘಟನೆ ಶಿವಮೊಗ್ಗದ  ಜಯನಗರದಲ್ಲಿ ನಡೆದಿದೆ. ಆಟವಾಡುತ್ತಿದ್ದಾಗ ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಸ್ಥಳದಲ್ಲಿಯೇ ಬಾಲಕ ಭರತ್(12) ಸಾವನ್ನಪ್ಪಿದ್ದಾನೆ.

ಭದ್ರಾವತಿ ತಾಲೂಕು ಅರಹತೊಳಲಿನಿಂದ ಶಿವಮೊಗ್ಗದ ದಂತ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಲು ಬಂದಿದ್ದ  ಭರತ್  ಎಂಬ 12 ವರ್ಷದ ಬಾಲಕನಿಗೆ ಜೋಕಾಲಿಯೇ ಜವರಾಯನಾಗಿ ಕಾಡಿದ್ದಾನೆ.

ವೈದ್ಯರ ಬಳಿ ತೋರಿಸಿಕೊಂಡ ನಂತರ ಭರತ್ ತಾಯಿ ಜೊತೆ ಜಯನಗರದ ವಿಧಾತ್ರಿ ಕೆಫ಼ೆ ಬಳಿ ಇರುವ ತನ್ನ ಅತ್ತೆಯ ಮನೆಗೆ ಬಂದಿದ್ದಾನೆ. ಊಟ ಮುಗಿಸಿದ ನಂತರ ಮನೆಯ ಹಾಲ್ ನಲ್ಲಿ ಸೀರೆ ಕಟ್ಟಿಕೊಂಡು ಜೋಕಾಲಿ ಆಡಲು ಮುಂದಾಗಿದ್ದಾನೆ. ತಾಯಿ ಮತ್ತು ಅತ್ತೆ ಕೊಠಡಿಯಲ್ಲಿ ಮಲಗಲು ತೆರಳಿದ್ದಾರೆ.

ಜೋಕಾಲಿಯ ಸೀರೆ ಸುತ್ತಿಕೊಂಡು ಭರತ್ ನ ಕುತ್ತಿಗೆಗೆ ಸುತ್ತಿಕೊಂಡಿದೆ. ನೆಲಕ್ಕೆ ಕಾಲು ಊರಲು ಹೋದ ಪರಿಣಾಮ ಜೋಕಾಲಿ ನೇಣಾಗಿ ಪರಿಣಮಿಸಿದೆ. ಮಗುವಿನ ಶಬ್ದ ಕೇಳುತ್ತಿಲ್ಲವೆಂದು ತಾಯಿ ಹಾಲ್ ಗೆ ಬಂದು ನೋಡುವಷ್ಟರಲ್ಲಿ ಭರತ್ ನ ಪ್ರಾಣ ಪಕ್ಷಿ ಹಾರಿಹೋಗಿದೆ.

ಜಯನಗರದ ವಿಧಾತ್ರಿ ಕೆಫೆಯಿಂದ ಎರಡನೇ ಮನೆಯಲ್ಲಿ ಈ ಘಟನೆ ನಡೆದಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.