Headlines

ಅಡುಗೆ ಮಾಡುವ ವಿಚಾರಕ್ಕೆ ಜಗಳ : ಅತ್ತೆಯ ಮೈಮೇಲೆ ಬಿಸಿ ಅನ್ನದ ತಿಳಿ ಸುರಿದ ಸೊಸೆ

ಸಾಗರ: ಅಡುಗೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಮತ್ತು ಸೊಸೆಯ ನಡುವೆ ಮಾತಿಗೆ ಮಾತು ಬೆಳೆದು ಸೊಸೆಯು ಅತ್ತೆಯ ಮೈಮೇಲೆ ಬಿಸಿ ಗಂಜಿಯ ತಿಳಿಯನ್ನು ಸುರಿದ ಘಟನೆ ಸಾಗರದ ಮುಳ್ಳಕೆರೆ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮುಳ್ಳಕೆರೆ ನಿವಾಸಿ ಪಾರ್ವತಮ್ಮ (58) ಎಂಬುವವರ ತಲೆ ಮೇಲೆ ಅವರ ಸೊಸೆ ನೇತ್ರಾ ಗಂಜಿ ಸುರಿದ ಪರಿಣಾಮ ತೀವ್ರ ಸುಟ್ಟ ಗಾಯಗಳಿಂದ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಸಿ ತಿಳಿಯನ್ನು ತಲೆ ಮೇಲೆ ಸುರಿಯುತ್ತಿದ್ದಂತೆ ಪಾರ್ವತಮ್ಮ ಅವರು ಜೋರಾಗಿ ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಸೊಸೆ ನೇತ್ರಾ ಅನ್ನದ ಪಾತ್ರೆಯಿಂದಲೇ ಅತ್ತೆಯ ತಲೆ ಮತ್ತು ಬೆನ್ನಿನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಪಾರ್ವತಮ್ಮನವರನ್ನು ಅವರ ಮಕ್ಕಳು ಮತ್ತು ಸ್ಥಳೀಯರು ಬಂದು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


ವರದಿ : ದೇವರಾಜ್ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *