ರಿಪ್ಪನ್ ಪೇಟೆ :ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಗೆ ಮೀಸಲಾತಿಯ ಅಧಿಸೂಚನೆ ಚುನಾವಣಾ ಆಯೋಗದಿಂದ ಹೊರಡಿಸಲಾಗಿದ್ದು. ಜಿಲ್ಲೆಯ ಕೆಲವೊಂದು ಕ್ಷೇತ್ರದಲ್ಲಿ ಮೀಸಲಾತಿಯ ಅಧಿಸೂಚನೆಯಲ್ಲಿ ದೋಷ ಕಂಡು ಬಂದಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಾಗರ -ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು.
ಉದಾಹರಣೆಗೆ ಶಿವಮೊಗ್ಗ ಜಿ.ಪಂ ವ್ಯಾಪ್ತಿಯ ಅರಬಿಳಚಿ ಮತ ಕ್ಷೇತ್ರದಲ್ಲಿ 3773 S.T ಮತದಾರರು ಇದ್ದಾರೆ. ಇಲ್ಲಿಗೆ ನೀಡಬೇಕಾದ ಮೀಸಲಾತಿಯನ್ನು 1421 ST ಮತದಾರರಿರುವ ಕುದುರೂರು ಮತ ಕ್ಷೇತ್ರಕ್ಕೆ ನೀಡಲಾಗಿದೆ, ಇದರಲ್ಲಿ ಕಾಣದ ಕೈಗಳು ಕೈಯಾಡಿಸಿರುವ ಹಾಗಿದೆ.
ಈ ಅವೈಜ್ಞಾನಿಕ ಮೀಸಲಾತಿ ಬಗ್ಗೆ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಚರ್ಚಿಸಲಾಗುವುದು. ಎಂದು ಶಾಸಕರಾದ ಹೆಚ್.ಹಾಲಪ್ಪ ನವರು ತಿಳಿಸಿದ್ದಾರೆ.
ವರದಿ: ಸೆಬಾಸ್ಟಿಯನ್ ಮ್ಯಾಥ್ಯೂಸ್ ರಿಪ್ಪನ್ ಪೇಟೆ