Headlines

ಗೋಡಂಬಿ ಹೆಸರಿನಲ್ಲಿ ಕಳಪೆ ಅಡಿಕೆ ಆಮದು: ಸೂಕ್ತ ಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ ಒತ್ತಾಯ

ರಿಪ್ಪನ್ ಪೇಟೆ:ದೇಶದಲ್ಲಿನ ಅಡಿಕೆ ವ್ಯಾಪಾರಿಗಳ ವಂಚಕರ ಜಾಲವು ಗೋಡಂಬಿ ಹೆಸರಿನಲ್ಲಿ ಕಳಪೆ ಗುಣಮಟ್ಟದ ಅಡಿಕೆಯನ್ನು ಇಂಡೋನೇಶಿಯಾದಿಂದ ಆಮದು ಮಾಡಿಕೊಳ್ಳುವ ಮೂಲಕ ದೇಶದ ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕೊಳ್ಳುವಂತೆ ಮಾಡುತ್ತಿದ್ದಾರೆ. ಈ ತರಹದ ಕಳಪೆ ಅಡಿಕೆ ಆಮದು ಮಾಡಿಕೊಳ್ಳುವವರ ವಿರುದ್ಧ ಕೇಂದ್ರ ಸರ್ಕಾರವು ಈ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಮತ್ತು ಗೃಹ ಮಂಡಳಿ ಅಧ್ಯಕ್ಷರಾದ ಶ್ರೀ ಆರಗ ಜ್ಞಾನೇಂದ್ರ ಇಂದಿಲ್ಲಿ ಒತ್ತಾಯಿಸಿದರು.

ಪಟ್ಟಣದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದ ಅವರು  ಅಡಿಕೆ ವಂಚಕರ ಜಾಲವು ಕಳಪೆ ಗುಣಮಟ್ಟದ ಅಡಿಕೆಗಳನ್ನು ಇಂಡೋನೇಷಿಯಾ ಮತ್ತು ವಿವಿಧ ದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಂಡು ಇಲ್ಲಿನ ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿ  ಸರಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಸುಂಕ ಮೋಸ  ವಂಚಿಸಿರುವ  ಹಿನ್ನಲೆಯಲ್ಲಿ  ಬಾಂಬೆ ಉಚ್ಚ ನ್ಯಾಯಾಲಯ ನಾಗಪುರ ಪೀಠದಲ್ಲಿ  16 ಸಾವಿರ ಕೋಟಿ ರೂಪಾಯಿಗಳ ಸುಂಕದ  ಅವ್ಯವಹಾರ ಸಾಬೀತಾಗಿದ್ದು ಈ  ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಲಾಗಿ  ಸಿಬಿಐ ತನಿಖೆಯಲ್ಲಿ ಯೂ ಕೂಡ ಈ ಆರೋಪ ಸಾಬೀತಾಗಿದ

ಕಳಪೆ ಗುಣಮಟ್ಟದ ಅಡಿಕೆ ಆಮದು ಮಾಡಿಕೊಳ್ಳುವುದರಿಂದ ದೇಶದಲ್ಲಿನ ಗುಣಮಟ್ಟದ ಅಡಿಕೆ ಹಾಗೂ ಅಡಿಕೆ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗದೇ  ವಂಚಿತರನ್ನಾಗಿಸಿದೆ ಎಂದು ವಿಷಾದ ವ್ಯಕ್ತಪಡಿಸಿ, ಕಳಪೆ ಗುಣಮಟ್ಟದ ಅಡಿಕೆ ಈ ದೇಶದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು  ಕೇಂದ್ರ ಸರ್ಕಾರ ಈ ಕೂಡಲೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಕಳಪೆ ಅಡಿಕೆ ಆಮದುಗಾರರ ಆಮದು ಪರವಾನಿಗೆ ರದ್ದು ಪಡಿಸಿ ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿರುವ ಭ್ರಷ್ಟ ಕೇಂದ್ರದ ಸುಂಕದ ಅಧಿಕಾರಿಗಳ ಮೇಲೆ ಕಠಿಣವಾದ ಕಾನೂನು ಕ್ರಮ ಜರುಗಿಸಿ ದೇಶದ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು  ಈ ಸಂದರ್ಭದಲ್ಲಿ ಒತ್ತಾಯಿಸಿದರು.

 ಸುದ್ದಿಗೋಷ್ಠಿಯಲ್ಲಿ  ಬೆಳ್ಳೂರು ತಿಮ್ಮಪ್ಪ,ಕಗ್ಗಲಿ ಲಿಂಗಪ್ಪ,ನಂದನ್ ಉಪಸ್ಥಿತರಿದ್ದರು.


ವರದಿ:ಸೆಬಾಸ್ಟಿಯನ್ ಮ್ಯಾಥ್ಯೂಸ್‌ ರಿಪ್ಪನ್ ಪೇಟೆ

Leave a Reply

Your email address will not be published. Required fields are marked *