ರಿಪ್ಪನ್‌ಪೇಟೆ : ಮದ್ಯದೊಂದಿಗೆ ಸೈನೆಡ್ ಸೇವಿಸಿ ಅಕ್ಕಸಾಲಿಗ ಸಾವು|Crime news

ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಚಿನ್ನದ ಕೆಲಸ ಮಾಡುವ ವ್ಯಕ್ತಿಯೊಬ್ಬ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗರ್ತಿಕೆರೆ ಗ್ರಾಮದ ಗುರುಮೂರ್ತಿ ಬಿ ಟಿ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಗರ್ತಿಕೆರೆ ಮೂಲದ ಗುರುಮೂರ್ತಿ ತನ್ನ ಕುಟುಂಬದೊಂದಿಗೆ ಬೆಳಗಾವಿಯಲ್ಲಿ ಚಿನ್ನದ ಕೆಲಸ ಮಾಡಿಕೊಂಡು ವಾಸವಿದ್ದು,ಕಳೆದ 04 ದಿನದ ಹಿಂದೆ ಗುರುಮೂರ್ತಿ ಮನೆ ಬಿಟ್ಟು ಗರ್ತಿಕೆರೆಗೆ ಬಂದಿದ್ದನು ಈ ಬಗ್ಗೆ ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು. ಗುರುಮೂರ್ತಿ…

Read More

ಪ್ರಯಾಣಿಕರಿದ್ದ ಬೋಗಿಗಳನ್ನು ಬಿಟ್ಟು ಮುಂದಕ್ಕೆ ಚಲಿಸಿದ ತಾಳಗುಪ್ಪ-ಬೆಂಗಳೂರು ರೈಲು|Train

ಶಿವಮೊಗ್ಗ ತಾಳಗುಪ್ಪ-ಬೆಂಗಳೂರು ರೈಲಿನ ಇಂಜಿನ್​ ಇವತ್ತು ಭದ್ರಾವತಿ ಸಮೀಪ  ಬೋಗಿಗಳಿಂದ ಕಳಚಿಕೊಂಡು ಮುಂದಕ್ಕೆ ಹೋಗಿತ್ತು. ಭದ್ರಾವತಿ ತಾಲೂಕು ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮೀಪದ ಬಿಳಕಿ ಪ್ರದೇಶದಲ್ಲಿ ಈ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.  ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು, (20652 – Talguppa Bangalore Intercity Sf Express) ನ ಇಂಜಿನ್ – ಬೋಗಿಗಳ ನಡುವೆ ಸಂಪರ್ಕ ಕಳೆದುಕೊಂಡಿದ್ದರಿಂದ ಘಟನೆ ಸಂಭವಿಸಿದೆ.  ಘಟನೆಯಿಂದ ಕೆಲ ಸಮಯ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು. ತಾಳಗುಪ್ಪದಿಂದ ಶಿವಮೊಗ್ಗ…

Read More

ಕಂಠಪೂರ್ತಿ ಕುಡಿದು, ತಿಂದು ನಂತರ ಬಿಲ್ ಕೇಳಿದ್ದಕ್ಕೆ ಬಿಸಿ ಎಣ್ಣೆ ಎರಚಿದ ದುಷ್ಕರ್ಮಿಗಳು

ಹೋಟೆಲ್ ನಲ್ಲಿ ಕಂಠಪೂರ್ತಿ ಕುಡಿದು ಊಟ ಮಾಡಿ ಬಿಲ್ ಕೇಳಿದ್ದಕ್ಕೆ ದುಷ್ಕರ್ಮಿಗಳು ಬಿಸಿ ಎಣ್ಣೆ ಎರಚಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಜನ್ನಾಪುರದ ಕಮರ್ಷಿಯಲ್ ಸ್ಟ್ರೀಟ್ ಮದ್ಯದ ಅಂಗಡಿಯಲ್ಲಿ ಮದ್ಯಪಾನ ಮಾಡಿದ ದುಷ್ಕರ್ಮಿಗಳು ಅಲ್ಲೇ ಇದ್ದ ಹೋಟೆಲ್ ಗೆ ಹೋಗಿದ್ದಾರೆ.ಕಂಠಪೂರ್ತಿ ಮದ್ಯ, ಮಾಂಸದೂಟ ಸೇವಿಸಿ ಬಿಲ್ ಕೇಳಿದಾಗ ಗಲಾಟೆ ಮಾಡಿದ್ದಾರೆ. ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿಯನ್ನು ಥಳಿಸಿದ್ದಲ್ಲದೆ, ಇದನ್ನು ಪ್ರಶ್ನಿಸಿದ ಮಾಲೀಕನೊಂದಿಗೆ ಜಗಳವಾಡಿದ್ದಾರೆ. ಮಾಲೀಕನ ಪರವಾಗಿ ಬಂದ ಅಡುಗೆ ಭಟ್ಟರಾದ ಮನೋಜ್ ಕುಮಾರ್…

Read More

ರಿಪ್ಪನ್ ಪೇಟೆ: ಅನೈತಿಕ ಚಟುವಟಿಕೆಯ ತಾಣವಾದ ಸ್ತ್ರೀಶಕ್ತಿ ಸಮುದಾಯ ಭವನ.

ರಿಪ್ಪನ್ ಪೇಟೆ: ಪಟ್ಟಣಕ್ಕೆ  ಹೊಂದಿಕೊಂಡಂತೆ ಇರುವ ದೊಡ್ಡಿನಕೊಪ್ಪ ಬಡಾವಣೆಯಲ್ಲಿರುವ ಸ್ತ್ರೀಶಕ್ತಿ ಸಮುದಾಯಭವನ ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿದೆ.ಲಕ್ಷಾಂತರ ರೂಪಾಯಿ ಮೊತ್ತದ ಅನುದಾನದಲ್ಲಿ ತಲೆಯೆತ್ತಿ ನಿಂತ  ಸ್ತ್ರೀ ಶಕ್ತಿ ಸಮುದಾಯಭವನ ಇದೀಗ ಪಾಳುಬಿದ್ದು ಹಾಗೂ ಪುಡಾರಿಗಳ ನೆಚ್ಚಿನ ಅನೈತಿಕ ತಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 2011-12ರಲ್ಲಿ ಅಂದಿನ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣರವರ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀ ಶಕ್ತಿ ಸಮುದಾಯ ಭವನವನ್ನು  ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿತ್ತು. ಈಗ ಸ್ತ್ರೀಶಕ್ತಿ…

Read More

NIA ಬಗ್ಗೆ ವದಂತಿ – ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ದ ದೂರು ದಾಖಲು

NIA ಬಗ್ಗೆ ವದಂತಿ – ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ದ ದೂರು ದಾಖಲು ಚುನಾವಣೆ ಹತ್ತಿರವಾಗುತ್ತಲೇ ರಾಜಕೀಯ ಪಕ್ಷಗಳಿಂದ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿದೆ. ಅದರಂತೆ ಮಾದ್ಯಮಗಳಲ್ಲಿ ಹೇಳಿಕೆ ನೀಡಿ ಬಿಜೆಪಿ ಕಾರ್ಯಕರ್ತರನ್ನು ಎನ್‌ಐಎ(NIA) ಬಂಧಿಸಿದೆ ಎಂಬ ವದಂತಿಗಳನ್ನು ಹರಡಿದ್ದಕ್ಕಾಗಿ ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ(Belur Gopalakrishna) ವಿರುದ್ಧ ಬಿಜೆಪಿ ವಕ್ತಾರ ಪ್ರಕಾಶ್​.ಎಸ್ ಚುನಾವಣಾಧಿಕಾರಿಗಳಿಗೆ​ ದೂರು ನೀಡಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರು ‘ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದ್ದು, ಆ…

Read More

ನೂತನ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಎದುರಾಗಲಿರುವ ಹತ್ತು ಹಲವು ಸವಾಲುಗಳು – ಸಮುದಾಯ ಆಸ್ಪತ್ರೆ, ಪಟ್ಟಣ ಪಂಚಾಯಿತಿ ಕನಸು ಈಡೇರುವುದೇ???? GKB

ನೂತನ ಶಾಸಕರಿಗೆ ಎದುರಾಗಲಿರುವ ಹತ್ತು ಹಲವು ಸವಾಲುಗಳು ರಿಪ್ಪನ್‌ಪೇಟೆ : ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆ ಮತ್ತು ರಿಪ್ಪನ್‌ಪೇಟೆ ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪಶು ಅಸ್ಪತ್ರೆಯ ವೈದ್ಯಾಧಿಕಾರಿಗಳ ಸಿಬ್ಬಂದಿಗಳ ಮತ್ತು ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸುವುದು ಶಾಶ್ವತ ಸುಸಜ್ಜಿತ ಬಸ್ ನಿಲ್ದಾಣ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯಿತ್‌ನ್ನಾಗಿ ಮೇಲ್ದರ್ಜೇಗೇರಿಸುವುದು ಸೇರಿದಂತೆ ಇನ್ನೂ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದು ನೂತನ ಶಾಸಕ ಗೋಪಾಲಕೃಷ್ಣ ಬೇಳೂರರಿಗೆ ಎದುರಾಗಿರುವ ಪ್ರಮುಖ ಸವಾಲುಗಳು….

Read More

ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಸುಜಿತ್ ಶೆಟ್ಟಿ ಬಂಧನ

ಮಂಗಳೂರು: ತೊಕ್ಕೊಟ್ಟು ಮಸೀದಿಯಲ್ಲಿ ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು‌ ಗುರುತಿಸಲಾಗಿದೆ. ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಅಶ್ಲೀಲವಾಗಿ…

Read More

ಬಿದರಹಳ್ಳಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಕೆ ದೇವೇಂದ್ರಪ್ಪ ರವರಿಗೆ ಒಲಿದ ರಾಜ್ಯ ಮಟ್ಟದ “ಗುರು ಶ್ರೇಷ್ಠ” ಪ್ರಶಸ್ತಿ

ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ 20-02-2022 ರಂದು ಆಯೋಜಿಸಲಾಗಿದ್ದ “ಕನ್ನಡ ನುಡಿ ವೈಭವ”-೨೦೨೨ ಎಂಬ ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಾಧ ಸಾಧನೆಗೈದಿರುವ ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯರಾಗಿರುವ ಕೆ ದೇವಂದ್ರಪ್ಪ ಇವರಿಗೆ ರಾಜ್ಯಮಟ್ಟದ ಗುರು “ಶ್ರೇಷ್ಠ ಪ್ರಶಸ್ತಿ” ಯನ್ನು ಘೋಷಿಸಲಾಗಿತ್ತು . ಆದರೆ ಕಾರಣಾಂತರಗಳಿಂದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಗವಿಸಿದ್ದೇಶ್ವರ ಮಠದಲ್ಲಿ ನಡೆದ ರಾಜ್ಯ ಮಟ್ಟದ “ಕನ್ನಡ ನುಡಿ ವೈಭವ -2022” ಕಾರ್ಯಕ್ರಮಕ್ಕೆ ಕೆ ದೇವೆಂದ್ರಪ್ಪನವರು ಪಾಲ್ಗೊಳ್ಳದೇ…

Read More

ರಾಜ್ಯದ ಗಮನ ಸೆಳೆದ ಹೊಸನಗರ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್

ರಾಜ್ಯದ ಗಮನ ಸೆಳೆದ ಹೊಸನಗರ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ವಿದ್ಯಾರ್ಥಿಗಳ ಮುಖ ನೋಡದೆ ಅವರ ಧ್ವನಿಯ ಮೂಲಕ ಹೆಸರನ್ನು ಗುರುತಿಸುವ ಕೇರಳದ ಶಿಕ್ಷಕನ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದ ಶಿಕ್ಷಕನೋರ್ವ ಅದೇ ಮಾದರಿಯಲ್ಲಿ ಗಮನ ಸೆಳೆದಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗೇರುಪುರ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಹೆಬ್ಬಳಗೆರೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದು, ಮೊದಲಿಗೆ ಎಸ್‌ಎಸ್‌ಎಲ್‌ಸಿ…

Read More

ಈ ಬಾರಿ ಶಿವಮೊಗ್ಗದಲ್ಲಿ ವೈಭವದ ದಸರಾಕ್ಕೆ ಮಹಾನಗರ ಪಾಲಿಕೆ ನಿರ್ಧಾರ !

ಶಿವಮೊಗ್ಗ : ಈ ಬಾರಿ ಮೈಸೂರು ದಸರಾ ನೆಡಸಲು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿಯೂ ಅದ್ದೂರಿ ದಸರಾ ನಡೆಸಲು ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಸರ್ಕಾರ ಅನುದಾನ ನೀಡಿದರೆ 9 ದಿನವೂ ವೈಭವದ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿದ್ದು ಒಂದು ವೇಳೆ ಅನುದಾನ ನೀಡದಿದ್ದರೆ 50 ಲಕ್ಷ ಪಾಲಿಕೆ ಬಜೆಟ್ ನಲ್ಲಿ ಆಚರಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ.  ದಸರಾ ವಿಷಯದಲ್ಲಿ ಮೊದಲು ಮಾತನಾಡಿದ ಹೆಚ್ ಸಿ ಯೋಗೇಶ್ ದಸರಾಕ್ಕೆ ಈvಬಾರಿ ಅನುದಾನವೆಷ್ಟು ಎಂಬುದು ಘೋಷಣೆ ಆದರೆ…

Read More