SAND MAFIA | ಪತ್ರಕರ್ತರ ಖರೀದಿಸಲು ಹೊರಟ್ರಾ ಮರಳು ದಂಧೆಕೋರರು..!!?
ಹೊಸನಗರ : ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಟವನ್ನು ಬುಡ ಸಮೇತ ಕಿತ್ತು ಹಾಕಬೇಕೆಂಬ ಸಂಕಲ್ಪದಲ್ಲಿರುವ ಜನಸಂಗ್ರಾಮ ಪರಿಷತ್ ನ ಗಿರೀಶ್ ಆಚಾರ್ ಹೋರಾಟಕ್ಕೆ ತಾಲೂಕಿನ ನೈಜ ಪತ್ರಕರ್ತರು ಬೆಂಬಲವಾಗಿ ನಿಂತಿದ್ದಾರೆ.
ಇದರಿಂದ ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಟ ಕಡಿಮೆಯಾಗಿದ್ದು ಮರಳು ದಂಧೆಕೋರರ ನಿದ್ದೆಗೆಡಿಸಿದೆ ಈ ಹಿನ್ನಲೆಯಲ್ಲಿ ಹೊಸನಗರದಲ್ಲಿ ಗುರುವಾರ ಮರಳು ದಂಧೆಕೋರರ ರಹಸ್ಯ ಸಭೆ ನಡೆದಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಈ ರಹಸ್ಯ ಸಭೆಯಲ್ಲಿ ಹೊಸನಗರ ತಾಲೂಕಿನ ಕೆಲವು ಪತ್ರಕರ್ತರುಗಳಿಗೆ ಕಪ್ಪ ಕಾಣಿಕೆಯನ್ನು ಮುಟ್ಟಿಸೋಣ ಗಿರೀಶ್ ಆಚಾರ್ ಒಬ್ಬನೇ ಹೋರಾಟ ಮಾಡಿಕೊಂಡಿರಲಿ ಎಂಬ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರದ ನಾಲ್ಕನೇ ಅಂಗವನ್ನೆ ಖರೀದಿಗೆ ಹೊರಟಿದ್ದಾರೆ ಎಂದರೆ ಮರಳು ದಂಧೆಕೋರರ ಅಕ್ರಮಗಳ ಬಾಹುಳ್ಯ ಎಷ್ಟಿರಬಹುದು….
ಈಗಾಗಲೇ ಖಡಕ್ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ ಹೊಸನಗರ ಪಿಎಸ್‌ಐ ಶಿವಾನಂದ್ ಕೆ ಹಾಗೂ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಮರಳು ದಂಧೆಗೆ ಕಡಿವಾಣ ಹಾಕಿದ್ದು ಹೊಸನಗರ ಹಾಗೂ ರಿಪ್ಪನ್‌ಪೇಟೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ಒಟ್ಟಾರೆಯಾಗಿ ಅಕ್ರಮಗಳನ್ನು ಪ್ರಶ್ನಿಸುವ ಪತ್ರಕರ್ತರನ್ನು ಆಮಿಷಕ್ಕೆ ಒಳಪಡಿಸಿ ಸಾಮಾಜಿಕ ಹೋರಾಟಗಾರ ಗಿರೀಶ್ ಆಚಾರ್ ರಂತವರನ್ನು ಮಟ್ಟಹಾಕಬೇಕೆಂಬ ಮರಳು ದಂಧೆಕೋರರ ಪ್ರಯತ್ನ ಫಲಿಸುತ್ತದೆಯೋ ಇಲ್ಲವೋ ಕಾದು ನೀಡಬೇಕಾಗಿದೆ.