ಅಪ್ಪು ನಮನ ಕಾರ್ಯಕ್ರಮದಲ್ಲಿ ಇಡೀ ಊರೂರಿಗೆ ಬಾಡೂಟ ಬಡಿಸಿ ಅಭಿಮಾನ ಮೆರೆದ ಚನ್ನಶೆಟ್ಟಿಕೊಪ್ಪ ಗ್ರಾಮಸ್ಥರು :
ಕರ್ನಾಟಕದ ಪವರ್ ಸ್ಟಾರ್ ಅಪ್ಪು ನಮ್ಮನ್ನ ಅಗಲಿ ಈಗಾಗಲೇ ಒಂದೂವರೆ ತಿಂಗಳು ಕಳೆದಿದೆ ಆದರೆ ಅವರ ಸಾಧನೆ ಸಾರ್ಥಕತೆ ಹಾಗೂ ಅವರ ದಾನ ಧರ್ಮದ ಕಾರ್ಯಗಳು ಎಂದು ಕೂಡ ನಮ್ಮ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಕರ್ನಾಟಕದ ದೊಡ್ಮನೆ ಹುಡುಗನ ಹೆಸರಿನಲ್ಲಿ ಇದೀಗ ರಾಜ್ಯಾದ್ಯಂತ ಗಲ್ಲಿಗಲ್ಲಿಗಳಲ್ಲಿ ಸರ್ಕಲ್ ಸರ್ಕಲ್ ಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಪ್ಪು ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳು ಇದೀಗ ಚನ್ನಶೆಟ್ಟಿಕೊಪ್ಪ ವೃತ್ತಕ್ಕೆ ಪುನೀತ್…