ರಿಪ್ಪನ್ ಪೇಟೆ: ಸರ್ಕಾರಿ ಸಮುದಾಯ ಆಸ್ಪತ್ರೆಗೆ ಮಂಜೂರಾದ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸಿ : ಗ್ರಾಪಂ ಸದಸ್ಯ ಆಸಿಫ಼್ ಭಾಷಾಸಾಬ್
ರಿಪ್ಪನ್ ಪೇಟೆ: ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿರುವ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸುವಂತೆ ಹಾಗೂ ಪೋಡಿ ಮಾಡಿಕೊಡುವಂತೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಆಸೀಫ಼್ ಜಿಲ್ಲಾಧಿಕಾರಿಗಳಿಗೆ ರಿಪ್ಪನ್ ಪೇಟೆ ಉಪ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೇ ನಂಬರ್ 59 ರಲ್ಲಿ ರಿಪ್ಪನ್ ಪೇಟೆ ಜನತೆಯ ಬಹುದಿನಗಳ ಕನಸಿನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಈ ಹಿಂದೆ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ರವರ ಅವಧಿಯಲ್ಲಿ 5 ಎಕರೆ ಜಾಗ…