ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಕನೆಕ್ಷನ್ ಇಲ್ಲದೇ ನೇತಾಡುತ್ತಿರುವ ಸಿಸಿ ಕ್ಯಾಮೆರಾಗಳು : ಕಾಟಾಚಾರಕ್ಕೆ ಹಾಕಿದ್ದೀರಾ ಅಧಿಕಾರಿಗಳೇ ????
ರಿಪ್ಪನ್ ಪೇಟೆ: ನಾಲ್ಕೂ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಿಪ್ಪನ್ ಪೇಟೆ ವಿನಾಯಕ ವೃತ್ತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಸಿ ಕ್ಯಾಮೆರಾಗಳು ಕನೆಕ್ಷನ್ ಇಲ್ಲದೇ ಕ್ಯಾಮೆರಾಗಳು ವೈರ್ ಗಳ ಜೊತೆ ನೇತಾಡುತ್ತಿವೆ. ಇದನ್ನು ನೋಡಿದರೆ “ನೇತಾಡುತ್ತಿರುವೆವೋ ನಾವು ಜೋತಾಡುತ್ತಿರುವೆವು” ಎಂದು ಯುಗಳ ಗೀತೆ ಹಾಡುತ್ತಿರುವಂತೆ ಭಾಸವಾಗುತ್ತದೆ !!! ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯು ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವಂತಹ ಪಟ್ಟಣವಾಗಿದೆ.ಇಲ್ಲಿನ ವಿನಾಯಕ ವೃತ್ತ ದಲ್ಲಿ ಅಧಿಕಾರಿಗಳು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಆದರೆ ಅದೀಗ ಸಂಪೂರ್ಣವಾಗಿ…