ಪ್ರಿಯಕರನಿಂದ ಪ್ರೇಯಸಿಗೆ ಚೂರಿ ಇರಿತ : ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ : ಪ್ರೇಮಿಗಳು ಇಬ್ಬರು ಗಂಭೀರ…!
ಉಡುಪಿ : ನಗರದ ಅಂಬಾಗಿಲು ಸಂತೆಕಟ್ಟೆ ಪೆಟ್ರೋಲ್ ಪಂಪ್ ಬಳಿ ಯುವಕನೋರ್ವ ತನ್ನ ಪ್ರೇಯಸಿಗೆ ಚೂರಿ ಇರಿದು ನಂತರ ತಾನೂ ಚೂರಿ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಯುವ ಜೋಡಿಗಳು ಬೈಕಿನಲ್ಲಿ ಬಂದು ನಂತರ ಜಗಳವಾಡಿ ಚೂರಿಯಲ್ಲಿ ಇರಿದು ಕೊಂಡಿದ್ದಾರೆ ಎನ್ನಲಾಗಿದೆ. ಯುವತಿಯು ಸ್ಥಳೀಯ ಅಂಬಾಗಿಲು ಕಕ್ಕುಂಜೆ ನಿವಾಸಿ ಸೌಮ್ಯಶ್ರೀ ಎಂದು ತಿಳಿಯಲಾಗಿದೆ.ಯುವಕನು ಘಟನಾ ಸ್ಥಳಕ್ಕೆ ಬಂದ ಬೈಕ್ ಐಡಿಯಲ್ ಮೆಡಿಕಲ್ ರೇಫ್ ನದ್ದು ಎಂದು ತಿಳಿದು ಬಂದಿದೆ,ಯವಕನ ವಿವರಗಳು ಇನ್ನಷ್ಟು ತಿಳಿದುಬರಬೇಕಿದೆ….