Headlines

ಶಿವಮೊಗ್ಗ ಪೊಲೀಸರ ವಿಶೇಷ ಕಾರ್ಯಾಚರಣೆ : ತಲವಾರ್,ಡ್ರ್ಯಾಗರ್ ಗಳು ಪತ್ತೆ

ಶಿವಮೊಗ್ಗ ನಗರದಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಅನುಮಾನಾಸ್ಪದವಾಗಿ ಓಡಾಡುತ್ತಿರುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ನಗರದಲ್ಲಿ 50 ಚೆಕ್ ಪೋಸ್ಟ್ ತೆರೆದು ಅನುಮಾನಾಸ್ಪವಾಗಿ ಓಡಾಡುವ ವಾಹನಗಳು ಮತ್ತು ವ್ಯಕ್ತಿಗಳನ್ನು ತಪಾಸಣೆ ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮನೆಗಳ ಮೇಲೆ ಪೊಲೀಸರು ದಾಳಿ‌ ನಡೆಸಿ ತಪಾಸಣೆ ನಡೆಸಿದ್ದಾರೆ.

ಅಲ್ಲದೇ ನಿರ್ಜನ‌ ಪ್ರದೇಶದಲ್ಲಿ ಕುಡಿದು ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಅವರ ವಿರುದ್ಧ 11 ಅಬಕಾರಿ ಪ್ರಕರಣ, 350 ಸಂಚಾರಿ ನಿಯಮ ಉಲ್ಲಂಘನೆ, 93 ಲಘು ಪ್ರಕರಣ, 96 ತಂಬಾಕು ಪ್ರಕರಣ, 10 ಜನರ ಮೇಲೆ ಗಾಂಜಾ ಸೇವನೆ ಪ್ರಕರಣ ದಾಖಲಿಸಿ, 1 ತಲ್ವಾರ್, 4 ಹರಿತವಾದ ಡ್ರ್ಯಾಗರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *