ತೀರ್ಥಹಳ್ಳಿ : ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ಮಹಾತ್ಮರು ಮತ್ತು ಹುತಾತ್ಮರ ನೆನಪಿಗಾಗಿ ಜನ ಜಾಗೃತಿಯ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಬೇಳೂರು ಗೋಪಾಲ ಕೃಷ್ಣ ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಮಹಾತ್ಮರು ಮತ್ತು ಹುತಾತ್ಮರ ನೆನಪಿಗಾಗಿ ಕಾಂಗ್ರೆಸ್ ಪಕ್ಷದಿಂದ ಪಾದಯಾತ್ರೆ ನೆಡೆಸಲು ಆದೇಶ ಬಂದಿರುವುದರಿಂದ ಇವತ್ತು ಪ್ರಥಮ ಬಾರಿಗೆ ಕಡಿದಾಳ್ ಮಂಜಪ್ಪ ಅವರ ಸಮಾಧಿಯ ಸ್ಥಳದಲ್ಲಿ ಪೂಜೆ ಮಾಡಿ ಆರ್ ಎಂ ಮಂಜುನಾಥ್ ಗೌಡರ ನೇತೃತ್ವದಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ. ಈ ಬೃಹತ್ ಹೋರಾಟಕ್ಕೆ ಜಯವಾಗಲಿ ಎಂದರು.
ನಂತರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ಇದೊಂದು ಕೊಲೆಗಡುಕ ಸರ್ಕಾರ ಎಂದು ಈಗಾಗಲೇ ಹೇಳಿದ್ದೆ. ಮಂಗಳೂರಿನ ಪ್ರವೀಣ್, ಶಿವಮೊಗ್ಗದ ಹರ್ಷ ಹೀಗೆ ಹಲವರ ಹತ್ಯೆಯಾಗಿದೆ. ಈ ಸರ್ಕಾರ ಜೀವಂತವಾಗಿಲ್ಲ. ಬೆಂಕಿ ಹಚ್ಚುತ್ತೇವೆ, ನಮ್ಮ ಕಾರ್ಯಕರ್ತರ ಮೈ ಮುಟ್ಟಿದರೆ ಸಾಯಿಸ್ತೀವಿ ಎನ್ನುವಂತ ಮಾತನಾಡುವುದು, ಕೊಲೆಗೆ ಕೊಲೆಯೇ ಮಾಡುತ್ತೇವೆ ಎನ್ನುವ ಈಶ್ವರಪ್ಪನಂತ ಮುಟ್ಟಳರಿದ್ದಾರೆ. ಇಂತಹ ದೋರಣೆಯಿಂದ ಜನ ಬೇಸತ್ತು ಹೋಗಿದ್ದಾರೆ. ಇವತ್ತು ಅವರಿಗೆ ಜನರು ಪಾಠ ಕಲಿಸಿದ್ದಾರೆ.ಹಿಂದುತ್ವ ಎಂದು ಎಷ್ಟು ಜನರನ್ನು ಸಾಯಿಸುತ್ತೀರಾ ಎಂದು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು.
ಈ ಸರ್ಕಾರ ಸಂಪೂರ್ಣ ವಿಫಲ ಹೊಂದಿದ್ದು ಗೃಹಸಚಿವರಾಗಿರಬಹುದು ಇತರ ಯಾವುದೇ ಸಚಿವರು ಜನರ ಜೀವ ಉಳಿಸಲು ವಿಫಲರಾಗಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ, ರೌಡಿ ಅಣ್ಣಿ, ವಾಸ್ತು ಚಂದ್ರಶೇಖರ ಗುರೂಜಿ ಹೀಗೆ ಎಷ್ಟು ಜನರ ಹತ್ಯೆ ಮಾಡಿಸುತ್ತೀರಾ ? ಇಂತಹ ದುಷ್ಟ ಸರ್ಕಾರವನ್ನು ಜನ ಕಿತ್ತೊಗೆಯಬೇಕು ಎಂದು ಹೇಳಿದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇
ತೀರ್ಥಹಳ್ಳಿ : ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ಮಹಾತ್ಮರು ಮತ್ತು ಹುತಾತ್ಮರ ನೆನಪಿಗಾಗಿ ಜನ ಜಾಗೃತಿಯ ಪಾದಯಾತ್ರೆಗೆ ಚಾಲನೆ ದೊರಕಿತು. ಕಾಂಗ್ರೆಸ್ ನ ಸಹಕಾರಿ ವಿಭಾಗದ ಸಂಚಾಲಕರಾದ ಆರ್ ಎಂ ಮಂಜುನಾಥ ಗೌಡರ ನೇತೃತ್ವದಲ್ಲಿ ತಾಲೂಕಿನ ಹಾರೋಗೊಳಿಗೆ ಗ್ರಾಮದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರ ಸಮಾದಿಯಿಂದ ಪಾದಯಾತ್ರೆ ಆರಂಭಗೊಂಡು ತೀರ್ಥಹಳ್ಳಿ ತಲುಪಲಿದೆ. ಕಡಿದಾಳ್ ಮಂಜಪ್ಪನವರ ಸಮಾದಿಗೆ ಹೂವು ಗುಚ್ಛ ಸಮರ್ಪಿಸಿ ಪಾದಯಾತ್ರೆಗೆ ಶಾಸಕ ಕಡಿದಾಳ್ ದಿವಾಕರ್ ಚಾಲನೆ ನೀಡಿದರು.
ಭಾರತ್ ಮಾತಾಕಿ ಜೈ, ವಂದೇಮಾತರಂ ಘೋಷಣೆ ಕೂಗುತ್ತಾ ಹೊರಟ ಪಾದಯಾತ್ರೆ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಕಡಿದಾಳ್ ಮಂಜಪ್ಪನವರ ಪ್ರತಿಮೆಗೆ ಹೂವಿನ ಹಾರ ಸಮರ್ಪಿಸಲಾಯಿತು. ಈ ವೇಳೆ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾಲಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಆರ್ ಎಂ .ಮಂಜುನಾಥ್ ಗೌಡರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಯುವಕರಿಗೆ ನೆನಪು ಮಾಡಿಕೊಡುವ ಹಿನ್ನಲೆಯಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಜುಲೈ 27 ರಂದು ದಿ.ಕಡಿದಾಳ್ ಮಂಜಪ್ಪನವರ ಜಯಂತಿ, ಜಯಂತಿ ಮುಗಿಸಿ ಪಾದಯಾತ್ರೆ ನಡೆಸಲಾಗುತ್ತಿದೆ.
ಗೋಪಾಲಗೌಡರು ಮತ್ತು ಕಡಿದಾಳ್ ರವರ ನಂತರದ ಪೀಳಿಗೆಗೆ ಈ ದೇಶದ ಇತಿಹಾಸ ತಿಳಿಯಕೊಡಬೇಕಿದೆ ಎಂದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ರವರ ಅಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಕೊಚ್ಚಿ ಹೋಗಬಾರದು ಎಂಬುದು ನಮ್ಮ ಪ್ರಯತ್ನವಾಗಿದೆ. ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಗೆ ಪರ್ಯಾಯವಾದ ಮಾರ್ಗವೆಂದರೆ ಗಾಂಧಿ ಮಾರ್ಗ ಒಂದೇ ಎಂದು ಜನರಿಗೆ ಹೇಳಬೇಕಿದೆ ಎಂದರು.
ಸ್ಥಳೀಯ ನಾಯಕರಾದ ಕಿಮ್ಮನೆ ರತ್ನಾಕರ್ ಪತ್ರ ಬರೆದ ಬಗ್ಗೆ ಪ್ರಸ್ತಾಪಿಸಿದ ಮಾಧ್ಯಮಗಳ ಪ್ರಶ್ನೆಗೆ ಕೆಲವರು ಅಡಚಣೆ ಮಾಡಿದ್ದಾರೆ. ಆದರೆ ಹಬ್ಬದ ವಾತಾವರಣವಿರುವ ಈ ಸಂದರ್ಭದಲ್ಲಿ ವೈಯುಕ್ತಿಕ ವಿಚಾರಗಳು ಬೇಡವೆಂದು ತಳ್ಳಿಹಾಕಿದರು.