Headlines

ಜಿಪಂ ಟಿಕೇಟ್ ಸಿಗದೇ ವೀರೇಶ್ ಆಲುವಳ್ಳಿ ರಾಜಕೀಯ ಅಲೆಮಾರಿಯಾಗುವ ದಿನ ದೂರವಿಲ್ಲ : ಉಮಾಕರ್ ಕಾನುಗೋಡು

ರಿಪ್ಪನ್‌ಪೇಟೆ : ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ವಿರುದ್ದ ನಾಲಗೆ ಹರಿಯಬಿಟ್ಟಿರುವ ವೀರೇಶ್ ಆಲುವಳ್ಳಿಯವರಿಗೆ ಗೋಪಾಲಕೃಷ್ಣ ರವರ ಬಗ್ಗೆ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅರಸಾಳು ಗ್ರಾಪಂ ಅಧ್ಯಕ್ಷರಾದ ಉಮಾಕರ್ ಕಾನುಗೋಡು ಹೇಳಿದ್ದಾರೆ.

ಇಂದು ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಆಲುವಳ್ಳಿ ವೀರೇಶ್ ರವರು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರಿದವರೇ.ಕಳೆದ ವಿಧಾನಸಬೆ ಚುನಾವಣ ಸಂಧರ್ಭದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿರುವ ತತ್ವ ಸಿದ್ದಾಂತ ಇಲ್ಲದ ವ್ಯಕ್ತಿತ್ವ ಅವರದು.ಈ ಹಿಂದೆ ಅವರ ಅಧಿಕಾರವದಿಯಲ್ಲಿ ಅನೇಕ ಹಗರಣಗಳನ್ನು ನಡೆಸಿದ್ದ ಇವರು ಇಂದು ನೈತಿಕತೆಯ ಪಾಠ ಮಾಡುತಿದ್ದಾರೆ.ಈಗ ಶಾಸಕ ಹರತಾಳು ಹಾಲಪ್ಪ ರವರನ್ನು ಓಲೈಸಿಕೊಳ್ಳಲು  ಬೇಳೂರು ವಿರುದ್ದ ಹೇಳಿಕೆ ನೀಡುತಿದ್ದಾರೆ. ಜಿಪಂ ಚುನಾವಣೆ ಟಿಕೆಟ್ ಗಾಗಿ ಕಾಯುತ್ತಿರುವ ಆಲುವಳ್ಳಿ ವೀರೇಶ್ ರವರಿಗೆ ಈ ಬಾರಿ ಟಿಕೆಟ್ ಸಿಗದೇ ರಾಜಕೀಯ ಅಲೆಮಾರಿಯಾಗುವುದು ಖಂಡಿತ ಎಂದು ಹೇಳಿದರು.


 ರಿಪ್ಪನ್‌ಪೇಟೆ ಘಟಕದ ಕಾಂಗ್ರೆಸ್ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್ ಮಾತನಾಡಿ ಎರಡು ಬಾರಿ ಶಾಸಕರಾದವರ ಬಗ್ಗೆ ಹೀಗೆ ನಾಲಗೆ ಹರಿಬಿಟ್ಟಿರುವುದು ಸರಿಯಲ್ಲ,ಕಳೆದ ಹತ್ತು ವರ್ಷಗಳಲ್ಲಿ ಅಧಿಕಾರವಿಲ್ಲದೇ ಇದ್ದರೂ ಬೇಳೂರು ಜನರೊಂದಿಗೆ ಇದ್ದಾರೆ.ಕಳೆದ ಕೊರೊನಾ ಸಂಧರ್ಭದಲ್ಲಿ ಸರ್ಕಾರವೇ ಕೈಕಟ್ಟಿ ಕುಳಿತಾಗ ಮಾಜಿ ಶಾಸಕರು ಜನರ ನೆರವಿಗೆ ಬಂದು ಸಾವಿರಾರು ಕಿಟ್ ಹಂಚಿದ್ದಾರೆ.ಮುಂದಿನ ಬಾರಿ ವೀರೇಶ್ ಆಲುವಳ್ಳಿ ರವರು ಬೇಳೂರು ಗೋಪಾಲಕೃಷ್ಣ ರವರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಎಂದರು.

ನಂತರ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಉಲ್ಲಾಸ್ ವೀರೇಶ್ ರವರು ಈ ಹಿಂದೆ ನಡೆಸಿದ ಹಗರಣಗಳನ್ನು ಜನ ಇನ್ನೂ ಮರೆತಿಲ್ಲ ಈಗ ಶಾಸಕರನ್ನು ಮೆಚ್ಚಿಸಲು ಎರಡು ಬಾರಿ ಶಾಸಕರಾಗಿ ನಂತರ ಅಧಿಕಾರ ಕಳೆದುಕೊಡರು ಜನರ ನಡುವೆಯೇ ಇರುವಂತಹ ಬೇಳೂರು ವಿರುದ್ದ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದನ್ನು ಸಹಿಸಲು ಸಾಧ್ಯವಿಲ್ಲ,ಮಾಜಿ ಶಾಸಕರ ವಿರುದ್ದ ಮಾತನಾಡಿ ಪ್ರಚಾರ ಪಡೆಯುವ ಹುನ್ನಾರ ಇನ್ನಾದರೂ ಬಿಡಿ ಎಂದರು.


ಈ ಸಂಧರ್ಭದಲ್ಲಿ ಮುಖಂಡರಾದ ಗಣಪತಿ, ಪ್ರಕಾಶ್ ಪಾಲೇಕರ್, ರಮೇಶ್ ಫ್ಯಾನ್ಸಿ,ಶ್ರೀಧರ್,ಮುಸ್ತಫಾ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *