Headlines

ಭದ್ರಾವತಿ : KSRTC ಬಸ್ ನಿಲ್ದಾಣಕ್ಕೆ ಎಂ ಜೆ ಅಪ್ಪಾಜಿ ಹೆಸರಿಡಲು ಆಗ್ರಹ

ಭದ್ರಾವತಿ: ನಗರದ ಕೆಎಸ್‌ಆರ್‌ ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ದಿ: ಎಂ.ಜೆ ಅಪ್ಪಾಜಿಯವರ ಹೆಸರನ್ನು ನಾಮಕರಣ ಗೊಳಿಸುವಂತೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾ ಣಕ್ಕೆ ಅಗತ್ಯವಿರುವ  ಅನುದಾನ ಶೀಘ್ರ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವಂತೆ ಸಚಿವ ಕೆ.ಎಸ್ ಈಶ್ವರಪ್ಪ ರವರಿಗೆ ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಎಲ್ಲಾ ವರ್ಗದ ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸಿರುವ ದಿ: ಎಂ.ಜೆ…

Read More

ಹಾರನಹಳ್ಳಿ : ನೇಣು ಬಿಗಿದುಕೊಂಡು ಏಳನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ :

ಹಾರನಹಳ್ಳಿ : ಪಟ್ಟಣದ ವ್ಯಾಪ್ತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಏಳನೆ ತರಗತಿ ವಿದ್ಯಾರ್ಥಿನಿಯೊಬ್ಬಳು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಏಳನೇ ತರಗತಿಯ ಸಹನಾ (13) ಮೃತಳು. ಶಿವಮೊಗ್ಗ ತಾಲೂಕು ಹಾರನಹಳ್ಳಿಯ ಸಹನಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಮನೆಯ ಬಾಗಿಲುಗಳನ್ನು ಬಂದ್ ಮಾಡಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡಿದ್ದಾಳೆ.ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹನಾ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.  ಹದಿಹರೆಯದ ಬಾಲಕ, ಬಾಲಕಿಯರಲ್ಲಿ ಇತ್ತೀಚಿನ ದಿನಗಳಲ್ಲಿ…

Read More

ಅವ್ಯವಸ್ಥೆಯ ಆಗರ ರಿಪ್ಪನ್ ಪೇಟೆಯ ನಾಡಕಚೇರಿ : ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರ ಹರಸಾಹಸ

ರಿಪ್ಪನ್ ಪೇಟೆ:  ತಾಲ್ಲೂಕಿನಲ್ಲಿಯೇ ಅತೀ ದೊಡ್ಡ ಹೋಬಳಿ ರಿಪ್ಪನ್ ಪೇಟೆ ವ್ಯಾಪ್ತಿಯ ನಾಡಕಛೇರಿಯಲ್ಲಿನ ಅವ್ಯವಸ್ಥೆಯಿಂದ ಜನಸಾಮಾನ್ಯರು ಪ್ರತಿದಿನ ಪರದಾಡುವಂತಾಗಿದೆ. ರಿಪ್ಪನ್ ಪೇಟೆ ಹೋಬಳಿ ವ್ಯಾಪ್ತಿಯು ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಸಾಮಾಜಿಕ ಭದ್ರತಾ ಯೋಜನೆಯ ವಿಧವಾ ವೇತನ, ವೃದ್ಯಾಪ್ಯ ವೇತನ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬೆಳೆ ದೃಡೀಕರಣ ಪತ್ರ, ಜಮೀನು ಸರ್ವೇಗಾಗಿ ಭೂ ಮಾಪನಾ ಅರ್ಜಿ ಸಲ್ಲಿಕೆ, ವಾಸಸ್ಥಳ, ವಂಶವೃಕ್ಷ, ಅತ್ಯವಶ್ಯಕ ದೃಡೀಕರಣ ಪತ್ರಗಳು ಸೇರಿ ವಿವಿಧ ಯೋಜನೆಗಳ ಸೌಲಭ್ಯಗಳಿಗಾಗಿ…

Read More

ರಿಪ್ಪನ್ ಪೇಟೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಳಿ ಕ್ಷಮೆ ಕೋರದೆ ಇದ್ದರೆ ಬೇಳೂರು ವಿರುದ್ದ ಬಿಲ್ಲವ ಸಮಾಜದಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ :

ರಿಪ್ಪನ್ ಪೇಟೆ: ಸೊರಬದಲ್ಲಿ ಇತ್ತೀಚೆಗೆ ನಡೆದ ಈಡಿಗರ ಸಮುದಾಯದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಮಾಜಿ ಶಾಸಕ ಗೋಪಾಲಕೃಷ್ಣ ಅವಹೇಳನಕಾರಿಯಾಗಿ ಮಾತನಾಡಿದ್ದು ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಕೆರೆಹಳ್ಳಿ ಹಾಗೂ ಹುಂಚಾ ಹೋಬಳಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜದ ಅಧ್ಯಕ್ಷರಾದ ಗರ್ತಿಕೆರೆ ಚಂದ್ರಪ್ಪ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಶ್ರೀನಿವಾಸ ಪೂಜಾರಿಯವರಿಗೆ ಹೆಬ್ಬೆಟ್ಟು,ಅವರಿಗೆ ಯಾವುದೇ ವಿಧ್ಯಾಭ್ಯಾಸ ಇಲ್ಲ…

Read More

ತೀರ್ಥಹಳ್ಳಿ:ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಅಬ್ದುಲ್ ಬಷೀರ್ ಸಾಹೇಬ್ ಇನ್ನಿಲ್ಲ

ತೀರ್ಥಹಳ್ಳಿ :  ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಬ್ದುಲ್ ಬಷೀರ್ ಇವರು ಇಂದು  ಧೀರ್ಘಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅಬ್ದುಲ್ ಕರೀಂ ಸಾಹೇಬ್ ಹಾಗು  ಶ್ರೀಮತಿ ಹಾಜರಾಂಬಿ ದಂಪತಿಗಳ ಪುತ್ರರಾಗಿ 1940 ರಲ್ಲಿ ಜನಿಸಿದ ಅಬ್ದುಲ್ ಬಶೀರ್ ರವರು ತಮ್ಮ ಇಪ್ಪತಾರನೆಯ ವಯಸ್ಸಿನಲ್ಲಿ ( 1956) ಡಿ ದರ್ಜೆಯ ನೌಕರರಾಗಿ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಸೇವೆಗೆ ಸೇರಿದ ಇವರು ನಂತರದ ದಿನಗಳಲ್ಲಿ ತೀರ್ಥಹಳ್ಳಿಯ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಅನುಪಮ ಸೇವೆ ಸಲ್ಲಿಸಿಸಿರುತ್ತಾರೆ. ತಮ್ಮ ಸೇವಾ ಅವದಿಯ…

Read More

ಸಕ್ರೆಬೈಲು ಆನೆ ಬಿಡಾರದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ : ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಅವರು ಇವತ್ತು ಭೇಟಿ ನೀಡಿದ್ದಾರೆ. ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪವರ್ ಸ್ಟಾರ್ ಅಭಿಮಾನಿಗಳು ಆನೆ ಬಿಡಾರದ ಬಳಿ ಸೇರಿದ್ದರು.ಮಧ್ಯಾಹ್ನ ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಸಾಕ್ಷ್ಯಚಿತ್ರದ ಚಿತ್ರೀಕರಣದ ಸಲುವಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ಬಿಡಾರದ ಕ್ರಾಲ್ ಪ್ರದೇಶದಲ್ಲಿ ಚಿತ್ರೀಕರಣ ಕಾರ್ಯ ನಡೆಸಲಾಯಿತು. ಚಿತ್ರೀಕರಣ ನಡೆಯುತ್ತಿದ್ದ ಕಾರಣಕ್ಕೆ ಕ್ರಾಲ್ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು…

Read More

ಕುಂಸಿ : ಬಹಿರ್ದೆಸೆಗೆಂದು ಹೊರಹೋಗಿದ್ದ ನಾಲ್ಕು ವರ್ಷದ ಮಗು ಶವವಾಗಿ ಪತ್ತೆ:

ಕುಂಸಿ : ಬಹಿರ್ದೆಸೆಗೆ ತೆರಳಿದ್ದ ನಾಲ್ಕು ವರ್ಷದ ಮಗು ಸೋಮವಾರದಿಂದ ಕಾಣೆಯಾಗಿದ್ದು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮಗುವಿನ ಕೊಲೆಯ ಬಗ್ಗೆ  ಶಂಕೆ ವ್ಯಕ್ತವಾಗಿದೆ. ಸೋಮವಾರದಂದು ಕಾಣೆಯಾಗಿದ್ದ ಮಗು ಇಂದು ಮುಂಜಾನೆ ಮನೆಯಿಂದ 1½ ಕಿಮಿ ದೂರದಲ್ಲಿ ಶವವಾಗಿ ಪತ್ತೆಯಾಗಿದೆ. ಜಿಲ್ಲೆಯ ಗಡಿಭಾಗದ ರಟ್ಟೆಹಳ್ಳಿಯಲ್ಲಿ ಆ.30 ರಂದು ಸಂಜು ಎಂಬ ನಾಲ್ಕು ವರ್ಷದ ಮಗು ಸಂಜು ಬಹಿರ್ದೆಸೆಗೆ ಹೋಗಿದ್ದವರು ಮನೆಗೆ ವಾಪಾಸಾಗಿರಲಿಲ್ಲ. ಸಂಜೆಯ ವರೆಗೆ ಹುಡುಕಿದ ಪೋಷಕರು ಕೊನೆಯಲ್ಲಿ ಕುಂಸಿ ಪೊಲೀಸ್ ಠಾಣೆಗೆ ದೂರು…

Read More

ಶಿವಮೊಗ್ಗ: ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್’ಗಳಿಂದ ರಾತ್ರೋರಾತ್ರಿ ಡಿಸೇಲ್ ಕಳ್ಳತನ!

ಶಿವಮೊಗ್ಗ: ನಗರದ ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್ ನಿಂದ ಡೀಸೆಲ್ ಕಳುವಾಗಿದೆ. ಶಿವಮೊಗ್ಗ ನಗರದ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್‌ಮೆಂಟ್ ಬಳಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಿಲ್ಲಿಸಿದ್ದ ಬಸ್ಗಳಿಂದ ಡೀಸೆಲ್ ಕದಿಯಲಾಗಿದ್ದು, ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್ಗಳಿಂದ ತಡರಾತ್ರಿ ವೇಳೆ ಡೀಸೆಲ್ ಕದಿಯಲಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ದರ ದಿನ ನಿತ್ಯ ಏರುತ್ತಿರುವುದರಿಂದ ಡಿಸೇಲ್ ಕಳ್ಳರ ಟಾರ್ಗೆಟ್ ಆಗಿದೆ.ನಾಲ್ಕು ಬಸ್ ಗಳನ್ನೂ ಶಿಕ್ಷಣ ಸಂಸ್ಥೆ ಬಳಿ ಸೆಕ್ಯೂರಿಟಿ ನಡುವೆಯೇ ನಿಲ್ಲಿಸಲಾಗಿದ್ದರೂ ಕಳ್ಳರು…

Read More

ಯಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕಕ್ಕೆ ಸಾರ್ವಜನಿಕರ ಆಗ್ರಹ :

ಹೊಸನಗರ : ಯಡೂರು ಸುಳುಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ಡಾಕ್ಟರ್ ಇಲ್ಲ ನಮಗೆ ಡಾಕ್ಟರ್ ಬೇಕು ಎಂದು ಪ್ರತಿಭಟನೆ ನಡೆಸಲಾಯಿತು. ಇಲ್ಲಿ ಸದ್ಯ ಆರ್ಯುವೇದ ಬಗ್ಗೆ ತಿಳಿದಿರುವ ಡಾಕ್ಟರ್ ಇದ್ದು ನಮಗೆ  ಇಂಗ್ಲಿಷ್ ಮೆಡಿಸನ್ ಕೋಡುವ ಡಾಕ್ಟರ್ ಬೇಕು. ತೀರ್ಥಹಳ್ಳಿ ಅಥವಾ ಹೊಸನಗರಕ್ಕೆ ಆರೋಗ್ಯ ಸರಿ ಇಲ್ಲ ಎಂದು ಹೋಗುವುದಾದರೆ  30 ಕ್ಕು ಹೆಚ್ಚು ಕಿಲೋಮೀಟರ್ ಅಗುತ್ತದೆ. ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಯಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದ 24…

Read More

ಹುಂಚಾ : ಗೃಹಮಂತ್ರಿಗಳ ಸ್ವಕ್ಷೇತ್ರದಲ್ಲಿ ಇಲ್ಲದವರ ಮೇಲೆ ಉಳ್ಳವರ ದರ್ಬಾರ್ : ಬಡ ವೃದ್ದೆಯ ಮೇಲೆ ದಬ್ಬಾಳಿಕೆ

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ವ್ಯಾಪ್ತಿಯ ಕರಿಗೆರಸು ಗ್ರಾಮದ ಸರ್ವೇ ನಂಬರ್ 37 ರಲ್ಲಿ ಜಮೀನಿನ ಖಾತೆದಾರನಿಗೆ ಹಕ್ಕು ಪತ್ರ ನೀಡಲಾಗಿದ್ದರೂ ಕೂಡಾ ಸದರಿ ಜಾಗದ ಪಕ್ಕದ ರೈತನೋರ್ವ ದುರುದ್ದೇಶದಿಂದ ಅಧಿಕಾರಿಗಳನ್ನು ಬಳಸಿಕೊಂಡು ಓಡಾಟಕ್ಕೆ ಜಾಗ ಬಿಡುವಂತೆ ಒತ್ತಾಯಿಸಿ ತೆರವುಗೊಳಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸದರಿ ಗ್ರಾಮದ ಸರಿಯಾಗಿ ಕಣ್ಣು ಕಾಣಿಸದ ಮತ್ತು ಕಿವಿ ಕೇಳಿಸದ ಸುಮಾರು 75 ವರ್ಷದ ವೃದ್ಧೆ ಗೌರಮ್ಮ ಕೋಂ ಡಾಕಪ್ಪ ಎಂಬುವರಿಗೆ ಸರ್ವೇ ನಂಬರ್ 37 ರಲ್ಲಿ ಒಂದು…

Read More