Headlines

ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ ಕೇಸ್ : ಸಿಎಂ ಬೊಮ್ಮಾಯಿ ಘೋಷಣೆ

ಭಾಷೆ ನೆಪದಲ್ಲಿ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಗೂಂಡಾ ಕಾಯ್ದೆ, ದೇಶದ್ರೋಹದ ಕೇಸ್ ದಾಖಲಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಕೃತ್ಯ ಖಂಡಿಸಿ ವಿಧಾನಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ. ಎಂಇಎಸ್ ವಿರುದ್ಧ ಸರ್ವಾನುಮತದ ಖಂಡನಾ ನಿರ್ಣಯ ಕೂಡ ಅಂಗೀಕರಿಸಲಾಗಿದೆ. ಸುವರ್ಣ ಸೌಧದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚೆನ್ನಮ್ಮನ ಪ್ರತಿಮೆ ನಿರ್ಮಿಸಲಾಗುವುದು ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಎಂಇಎಸ್ ಬ್ಯಾನ್ ಮಾಡಲು ಆಗದಿದ್ದರೂ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು…

Read More

ಕ್ಷುಲ್ಲಕ ಕಾರಣಕ್ಕೆ ಪದವಿ ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಕೊಪ್ಪ: ಇಲ್ಲಿನ ಪ್ರಥಮ ಧರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಮಾ (20)  ಸೋಮವಾರ ಬೆಳಿಗ್ಗೆ ಕುದುರೆಗುಂಡಿಯಲ್ಲಿರುವ ಮನೆಯಲ್ಲಿ ವೇಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮನೆಯಲ್ಲಿ ಮೃತ ಸುಮಾ ಅವರು ನೀರನ್ನು ಬಿಸಿ ಮಾಡಿ ತಂದಿಟ್ಟಿದ್ದರು. ಈ ವೇಳೆ ಅಕ್ಕನ ಏಳು ತಿಂಗಳ ಮಗುವು ಬಿಸಿ ನೀರನ್ನು ಮುಟ್ಟಿದ ಪರಿಣಾಮ ಮಗುವಿನ ಮೈಯಲ್ಲಿ ಗುಳ್ಳೆಗಳು ಬಂದಿದ್ದವು.  ತಕ್ಷಣ ಮಗುವಿನ ಪೋಷಕರು ಕೊಪ್ಪ ಸರ್ಕಾರ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು.  ಮಗುವಿಗೆ…

Read More

ಜಾತಿ ಪದ್ದತಿಯನ್ನು ವಿನಾಶಗೊಳಿಸಬೇಕು : ಡಾ.ಸತೀಶಕುಮಾರ ಹೊಸಮನಿ

ಶಿವಮೊಗ್ಗ : ವರ್ಣಾಶ್ರಮವನ್ನು ತಿದ್ದುವುದಲ್ಲ. ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿ ನುಡಿದರು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ, ಕವಿಶೈಲದ ಹೆಮಾಂಗಣ ಸಭಾಂಗಣದಲ್ಲಿ  ಡಿ. 19 ರ ಭಾನುವಾರ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ಇವರು ಹಮ್ಮಿಕೊಂಡಿದ್ದ ಕುವೆಂಪುರವರ ಕನ್ನಡ ಡಿಂಡಿಮವ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಓಮಿಕ್ರಾನ್ ಸೋಂಕು ಪತ್ತೆ : ಮಲೆನಾಡಿಗೂ ಕಾಲಿಟ್ಟ ವಿಶ್ವವನ್ನೇ ಕಾಡುತ್ತಿರುವ ಹೆಮ್ಮಾರಿ

ಶಿವಮೊಗ್ಗ : ಹಲವು ದೇಶದಲ್ಲಿ ಆರ್ಭಟ ನೆಡೆಸುತ್ತಿರುವ ಕೊರೋನಾ ವೈರಸ್ ನ ಹೊಸ ತಳಿ ಒಮಿಕ್ರಾನ್ ಶಿವಮೊಗ್ಗ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ.  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ 20 ವರ್ಷದ ಯುವತಿಯೊಬ್ಬರಿಗೆ ಒಮಿಕ್ರಾನ್ ಸೊಂಕು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.  ಡಿಸೆಂಬರ್ 7ರಂದು ಭದ್ರಾವತಿ ಖಾಸಗಿ ನರ್ಸಿಂಗ್ ಕಾಲೇಜಿನ 27 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕಿತರ ಗಂಟಲ ದ್ರವವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈ ಪೈಕಿ ಓರ್ವ ವಿದ್ಯಾರ್ಥಿನಿಯಲ್ಲಿ ಓಮಿಕ್ರಾನ್…

Read More

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಹರಿಹಾಯ್ದ ಶಾಸಕ ಹರತಾಳು ಹಾಲಪ್ಪ :

ಸಾಗರ : ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ನನ್ನನ್ನು ವಲಸಿಗ ಎಂದು ಟೀಕೆ ಮಾಡಿದ್ದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ. ರಾಜಕಾರಣದಲ್ಲಿ ವಲಸೆ ಸಹಜ. ಕಾಂಗ್ರೇಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಕೇರಳಕ್ಕೆ ಬಂದಿದ್ದು, ಡಿ.ಕೆ.ಶಿವಕುಮಾರ್ ಸಾತನೂರಿನಲ್ಲಿ ಸ್ಪರ್ಧೆ ಮಾಡಿದ್ದು, ಸಿದ್ದರಾಮಯ್ಯ ಬಾದಮಿಯಿಂದ ಸ್ಪರ್ಧೆ ಮಾಡಿದ್ದು ವಲಸೆ ರಾಜಕಾರಣವಲ್ಲವೇ ಎಂದು ಬೇಳೂರಿಗೆ ಟಾಂಗ್ ನೀಡಿದ ಹಾಲಪ್ಪ, ನಮ್ಮ ಪಕ್ಷದಲ್ಲೂ ಸಹ ತಮ್ಮ ಕ್ಷೇತ್ರ ಬಿಟ್ಟು ಮತ್ತೊಂದು ಕಡೆ ಹೋಗಿ ಸ್ಪರ್ಧೆ ಮಾಡಿದ ಉದಾಹರಣೆ ಇದೆ. ಮಾಜಿ…

Read More

ವಲಸೆ ಬಂದು ಹೋಗುವ ಶಾಸಕರಿಗೆ ಸಾಗರ ತಾಲೂಕಿನ ಬಗ್ಗೆ ಏನು ಗೊತ್ತು : ಬೇಳೂರು ಗೋಪಾಲಕೃಷ್ಣ

ಸಾಗರ. ಇಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರೀಕಾ ಗೋಷ್ಟಿಯಲ್ಲಿ  ಸಾಗರದ ಮಾಜಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು  ಶಾಸಕ ಹಾಲಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ ಶಾಸಕ ಹಾಲಪ್ಪ ತುಮರಿ ಭಾಗದ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ನೀಡುವಲ್ಲಿ ವಿಫಲವಾಗಿದ್ದಾರೆ. ಕ್ರಿಕೇಟ್ ನೋಡುತ್ತ ಕುಳಿತ ಶಾಸಕ ಹಾಲಪ್ಪ ಸರಿಯಾದ ಸಮಯಕ್ಕೆ ತುಮರಿ ಗ್ರಾಮಕ್ಕೆ ಹೋಗಿದ್ದರೆ ಎರಡು ಜೀವ ಉಳಿಯುತ್ತಿತ್ತು ಇವರಿಗೆ ಎರಡು ಜೀವಕ್ಕಿಂತ ಕ್ರಿಕೆಟ್ ನೋಡುವುದೆ ಮುಖ್ಯವಾಗಿದೆ. ಆಕ್ಸಿಜನ್ ವ್ಯವಸ್ಥೆ ಇಲ್ಲದ ಸೆಕೆಂಡ್ ಹ್ಯಾಂಡ್ ಆಂಬುಲೆನ್ಸ್ ನೀಡಿ ಪ್ರಚಾರಕ್ಕಾಗಿ ನಗರಸಭೆಯಲ್ಲಿ ಸಮಾರಂಭ…

Read More

ಕೆಂಚನಾಲದಲ್ಲಿ ಮಾರಿಕಾಂಬ ಕನ್ನಡ ಯುವಕ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ : ಎರಡು ದಿನದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕೆಂಚನಾಲದಲ್ಲಿ ಮಾರಿಕಾಂಬ ಕನ್ನಡ ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ ಕೆಂಚನಾಲ  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್ ಮಾತನಾಡಿ ಕ್ರೀಡೆ ಎನ್ನುವುದು ಯುವಕರ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಕಂಪ್ಯೂಟರ್‌ ಚಟುವಟಿಕೆಗಳಲ್ಲಿ ತೊಡಗದೆ, ದೈಹಿಕ ಸದೃಢತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಬೇಕು `ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ…

Read More

ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಹೇಳಿಕೆ ಖಂಡಿಸಿ ಬಿಜೆಪಿ ವತಿಯಿಂದ ರಿಪ್ಪನ್ ಪೇಟೆಯಲ್ಲಿ ಪ್ರತಿಭಟನೆ :

ರಿಪ್ಪನ್ ಪೇಟೆ: ಮಾಜಿ ಸಭಾಪತಿ ಹಾಗೂ ಹಾಲಿ ಶಾಸಕ ರಮೇಶ್ ಕುಮಾರ್ ರವರ ಹೇಳಿಕೆಯನ್ನು ಖಂಡಿಸಿ ಹೊಸನಗರ ತಾಲೂಕ್ ಬಿಜೆಪಿ ಮಹಿಳಾ ಮೋರ್ಚಾ ಮತ್ತು ರಿಪ್ಪನ್ ಪೇಟೆಯ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಪಟ್ಟಣದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ನೇತೃತ್ವವಹಿಸಿ ಮಾತನಾಡಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಿನ್ನೆ ಮಾಜಿ ಸ್ಪೀಕರ್ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ರವರು…

Read More

ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ ನಿಧನ : ಗಣ್ಯರ ಸಂತಾಪ

ಮಾಜಿ ಕೇಂದ್ರ ಸಚಿವ,ಹಿರಿಯ ಕಾಂಗ್ರೆಸ್ ನಾಯಕ ಆರ್.ಎಲ್.ಜಾಲಪ್ಪ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 96 ವರ್ಷ ಪ್ರಾಯವಾಗಿತ್ತು. ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜಾಲಪ್ಪ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದೊಡ್ಡಬಳ್ಳಾಪುರದ ತೂಬಗೆರೆ ನಿವಾಸದಲ್ಲಿ ಪಾರ್ಶುವಾಯುವಿಗೆ ತುತ್ತಾಗಿದ್ದ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಗಡೆ ಅವರ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಅವರು,ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1996…

Read More

ಶಿವಮೊಗ್ಗದಲ್ಲಿ ಅನಾಮಧೇಯ ಶವ ಪತ್ತೆ :

ಶಿವಮೊಗ್ಗ : ನಗರದ ಮುಸ್ಲಿಂ ಸ್ಮಶಾನದ ಮುಂಭಾಗದ ಕಬ್ಬಿನ ಹಾಲಿನ ಮಶೀನ್ ಪಕ್ಕದ ಮರದಲ್ಲಿ ಸುಮಾರು 35 ವರ್ಷದ ಅನಾಮಧೇಯ ಪುರುಷನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ. ಅನಾಮಧೇಯ ವ್ಯಕ್ತಿಯು ಸುಮಾರು 5.6 ಅಡಿ ಎತ್ತರ, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು ಹಾಗೂ 01 ಇಂಚು ಉದ್ದದ ಕುರುಚಲು ಗಡ್ಡ ಮೀಸೆ ಇರುತ್ತದೆ. ಮೃತನು ಕಂದು ಕೆಂಪು…

Read More