ರಿಪ್ಪನ್ ಪೇಟೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ :
ರಿಪ್ಪನ್ ಪೇಟೆ : ಪಟ್ಟಣ ಹಾಗೂ ಅರಸಾಳು ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ, ಖುಷಿ, ಉಲ್ಲಾಸಗಳಿಂದ ಆಚರಿಸಿದರು . ಶುಕ್ರವಾರ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಗಳೊಂದಿಗೆ ಸಂಭ್ರಮದ ಕ್ರಿಸ್ಮಸ್ ಆಚರಣೆ ನಡೆಯಿತು. ಸಾಮೂಹಿಕ ಪ್ರಾರ್ಥನೆ, ದಿವ್ಯಬಲಿ ಪೂಜೆ ನಡೆಯುವ ಭಕ್ತಿ ಶ್ರದ್ಧೆಯ ಕೇಂದ್ರವಾದ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು . ಚರ್ಚ್‌ಗಳ ವಠಾರದಲ್ಲಿ ಸುಂದರ ಗೋದಲಿಗಳನ್ನು ರಚಿಸಿ, ಏಸುಕ್ರಿಸ್ತರ ಜನನವನ್ನು ಸಂಕೇತಿಸುವ ದೃಶ್ಯಗಳ ಮರುಸೃಷ್ಟಿಯಲ್ಲಿ ಸಂಭ್ರಮಿಸಿದರು . ಗೋದಲಿಗಳ ಮುಂದೆ ಮಕ್ಕಳು. ಹಿರಿಯರು….