Breaking
12 Jan 2026, Mon

ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು : ಹೊಂಬುಜಾ ಶ್ರೀ

ಹುಂಚ :  ಮನುಷ್ಯನ  ಜೀವನದಲ್ಲಿ ಅನೇಕ ಸಂದರ್ಭಗಳು ಸ್ಪರ್ಧಾತ್ಮಕವಾಗಿ ಬರುವಂಥ ಸನ್ನಿವೇಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು ಎಂದು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು.

ಅವರು ಹೊಸನಗರ ತಾಲೂಕಿನ ಹುಂಚ ಗ್ರಾಮದ ಮಹಾವೀರ್ ಜೈನ್ ಭವನದಲ್ಲಿ ನಡೆದ ನವೋದಯ ಮತ್ತು ಮುರಾರ್ಜಿ ಶಾಲೆ – ಉಚಿತ ತರಬೇತಿ ಶಿಭಿರದಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೆ ಆಶೀರ್ವದಿಸಿ, ಅಭಿನಂದನಾ ಪತ್ರವನ್ನು ನೀಡಿ ಮಾತನಾಡಿ ಮನುಷ್ಯನ  ಜೀವನದಲ್ಲಿ ಅನೇಕ ಸಂದರ್ಭಗಳು ಸ್ಪರ್ಧಾತ್ಮಕವಾಗಿ ಬರುವಂಥ ಸನ್ನಿವೇಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಯ ಆರಂಭಿಕ ಹಂತವನ್ನು ಮಾಡಿದ್ದೀರಿ. ನಿಮ್ಮೆಲ್ಲರ ಮತ್ತು ಪೋಷಕರ ಕನಸನ್ನು ನನಸು ಮಾಡುವ ಸುಯೋಗ ಈ ಶಿಭಿರದಿಂದ ದೊರೆತಂತಾಗಿದೆ ಎಂದು ಭಾವಿಸಿ, ನಿಮ್ಮೆಲ್ಲರ ಭವಿಷ್ಯ ಉತ್ತಮವಾಗಿರಲಿ, ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿಯಿಂದ ಸ್ಥಾನಿಯವಾದಂತಹ ವಿಚಾರಗಳನ್ನು, ಅವರ ಮಾತೃ ಬಾಷೆಯಲ್ಲಿ ತಿಳಿಸುವಂತಹ ವ್ಯವಸ್ಥೆ, ಅಲ್ಲಿನ ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ಸರಕಾರದ ಆಲೋಚನೆ. ಈ ಯೋಜನೆಯಿಂದ ಮಕ್ಕಳಲ್ಲಿ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಅರ್ಥ ಮಾಡಿಕೊಂಡು ಹೋಗುವಂತಹ ಸಂಸ್ಕೃತಿ ಮಕ್ಕಳಲ್ಲಿ ಬೆಳೆಯಬೇಕು ಎಂದರು.


ಈ ಶಿಬಿರದ ರೂವಾರಿಯಾದ ಪ್ರಕಾಶ್ ಜೋಯ್ಸ್ (ಕಾಗ್ನಿಜಂಟ್, ಬೆಂಗಳೂರು) ಮಾತನಾಡಿ ” ನಮ್ಮ ತಂಡ ಕಂಡ ಚಿಕ್ಕ ಕನಸು ನಮ್ಮೆಲ್ಲರ ಮೊದಲ ಸಣ್ಣ ಪ್ರಯತ್ನ,ಉತ್ತಮ ಶಿಕ್ಷಣದ ಅಡಿಪಾಯದ ಕಡೆಗೆ ಫಲಪ್ರದವಾಗಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ.. ನಮ್ಮ ಶಿಭಿರದ ಏಳು ಮಕ್ಕಳು ಮುರಾರ್ಜಿ ದೇಸಾಯಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರುತ್ತಾರೆ ಎಂದರು.

ನಂತರ ಮಾತನಾಡಿದ ಹುಂಚ ಗ್ರಾಪಂ ಉಪಾಧ್ಯಕ್ಷರಾದ ದೇವೇಂದ್ರ ಜೈನ್ ಇದೊಂದು ಅತ್ಯದ್ಭುತ ಕಲ್ಪನೆ, ತಾವು ನಡೆದು ಬಂದ ದಾರಿಯನ್ನು ಬೇರೆ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಪರಿಕಲ್ಪನೆ ಶ್ಲಾಘನೀಯ,ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಎಂದರು. 

ಈ ಶಿಬಿರದಲ್ಲಿ ಭಾಗವಹಿಸಿದ್ದ ಒಟ್ಟು 27 ಮಕ್ಕಳಲ್ಲಿ, 7 ಮಕ್ಕಳಾದ, ಸ್ಕಂದನ್, ಅನನ್ಯ ವಿ ಎಂ, ಧನುಶ್ರೀ, ತರುಣ್, ಸುಚೇಂದ್ರ, ಅನನ್ಯ ಇ ಎನ್, ಧನಂಜಯ ಮುರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದು, ಕೆಳದಿ, ಹೊಸನಗರ, ತೀರ್ಥಹಳ್ಳಿ ವಸತಿ ಶಾಲೆಗಳಲ್ಲಿ ಸೇರ್ಪಡೆಗೊಂಡಿರುತ್ತಾರೆ. ಉಳಿದ ಎಲ್ಲಾ ಮಕ್ಕಳು ನವೋದಯ ಶಾಲೆಯ ಎರಡನೇ ಫಲಿತಾಂಶಕ್ಕೆ ಕಾಯುತ್ತಿದ್ದಾರೆ.

ಈ ಸಮಾರಂಭದಲ್ಲಿ ಶಿಬಿರದ ಸಂಚಾಲಕರಾದ ಅಭಿಷೇಕ್ , ಪ್ರಶಾಂತ್, ದಿನೇಶ್ ಶಿಕ್ಷಕರು, ಆದಿತ್ಯ ಶಿಕ್ಷಕರು, ಸಿಂಧು ಮತ್ತು ಶಿಭಿರಾರ್ಥಿಗಳ ಪೋಷಕರು, ಗ್ರಾಮಸ್ಥರು ಭಾಗವಹಿದ್ದರು.

ಮುಂದಿನ ಬಾರಿಯ ತರಬೇತಿಯ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಕಾಶ್ ಜೋಯ್ಸ್ – 9980463013
ಅಭಿಷೇಕ್ – 7760055310

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *