Headlines

ರಿಪ್ಪನ್‌ಪೇಟೆ : ಮತಾಂತರಕ್ಕೆ ಯತ್ನ ಆರೋಪ – ಹಿಂದೂಪರ ಸಂಘಟನೆಗಳಿಂದ ತರಾಟೆ

ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯಲ್ಲಿನ ಖಾಸಗಿ ವಸತಿ ಗೃಹದ ಸಭಾ ಭವನದಲ್ಲಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಪಂಗಡದವರು ಹಿಂದೂ ಧರ್ಮದ ಕೆಲವರನ್ನು ಮತಾಂತರ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ರಿಪ್ಪನ್ ಪೇಟೆ ಹಿಂದೂ ಪರಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ವಸತಿ ಗೃಹದ ಸಭಾಭವನಕ್ಕೆ ಧಾವಿಸಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಸಂಘಟನೆಯವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಭಾನುವಾರ ನಡೆದಿದೆ.



ನಡೆದಿದ್ದೇನು…?

ಪ್ರಾರ್ಥನಾ ಕೇಂದ್ರ ಹೊರತುಪಡಿಸಿ ಖಾಸಗಿ ಸ್ಥಳಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಪಂಗಡದವರು ರಿಪ್ಪನ್‌ಪೇಟೆ ಗ್ರಾಮಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದರು ಅದನ್ನು ಗ್ರಾಮಾಡಳಿತ ತಿರಸ್ಕರಿಸಿ ಯಾವುದೇ ಕಾರಣಕ್ಕೂ ಖಾಸಗಿ ಸ್ಥಳಗಳಲ್ಲಿ ಅವಕಾಶವಿಲ್ಲವೆಂದು ಹೇಳಿತ್ತು.ಆದರೆ ಅರ್ಜಿ ಸಲ್ಲಿಸಿದ ಪ್ರತಿಯನ್ನು ಇಟ್ಟುಕೊಂಡು ಖಾಸಗಿ ವಸತಿಗೃಹದವರಿಗೆ ತೋರಿಸಿ ನಮಗೆ ಪಂಚಾಯತ್ ಅನುಮತಿ ಇದೆಯೆಂದು ಸಭಾಂಗಣ ಬಾಡಿಗೆ ಪಡೆದಿದ್ದಾರೆ.


ಭಾನುವಾರ ಖಾಸಗಿ ಸಭಾಂಗಣದಲ್ಲಿ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪಟ್ಟಣದ ಹಿಂದೂಪರ ಸಂಘಟನೆಗಳು ಮತ್ತು ಸಾರ್ವಜನಿಕರು ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿ ಎಲ್ಲಾರನ್ನು ಕಳುಹಿಸಿಕೊಟ್ಟಿದ್ದಾರೆ.


ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿದ ಹಿಂದೂಪರ ಸಂಘಟನೆಯ ಸುಧೀಂದ್ರ ಪೂಜಾರಿ ಕಳೆದ ಕೆಲವು ವರ್ಷಗಳಿಂದ ರಿಪ್ಪನ್ ಪೇಟೆ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ದಲಿತರು ಹಿಂದುಳಿದವರು ಮತ್ತು ಬಡವರನ್ನು ಗುರಿಯನ್ನಾಗಿಟ್ಟುಕೊಂಡು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಪಂಗಡದ ಮತಾಂಧ ಶಕ್ತಿಗಳು ಹಿಂದೂ ಧರ್ಮದವರನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದಾರೆ.ಈ ಬಗ್ಗೆ ರಕ್ಷಣೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ತಿಳಿಸಿದರು.



ಈ ಸಂಧರ್ಭದಲ್ಲಿ ಹಿಂದೂಪರ ಮುಖಂಡರಾದ ಸುಂದರೇಶ್ ,ವೈ ಜೆ ಕೃಷ್ಣ, ಸುಧೀಂದ್ರ ,ರಾಘವೇಂದ್ರ ,ನಿರೂಪ್ ಕುಮಾರ್ ,ರಂಜನ್ ಕುಮಾರ್ , ಮತ್ತು ಗವಟೂರು ವಾರ್ಡ್ ಗ್ರಾಪಂ ಸದಸ್ಯ ಆಸೀಫ಼್ ಸೇರಿದಂತೆ ಇನ್ನಿತರರಿದ್ದರು.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *