ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ನಿಧನ :
ಕೋಣಂದೂರು : ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ರವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಇಂದು ಕಾರ್ಯನಿಮಿತ್ತ ಕಾರ್ ನಲ್ಲಿ ಶಿವಮೊಗ್ಗಕ್ಕೆ ತೆರಳಿ ವಾಪಾಸ್ ಗರ್ತಿಕೆರೆಯ ನಿವಾಸಕ್ಕೆ ಹಿಂದಿರುಗುವಾಗ ಆಯನೂರ್ ಬಳಿ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಕಾರಿನ ಚಾಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಅಷ್ಟರಲ್ಲೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.ಮೃತದೇಹವನ್ನು ಆಂಬುಲೆನ್ಸ್ ಮೂಲಕ ಗರ್ತಿಕೆರೆಯ ಸ್ವ ಗೃಹಕ್ಕೆ ತರಲಾಗುತ್ತಿದೆ. ಕೋಣಂದೂರು ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿ ಮೂಡಿಸಿದ್ದ ಗಣೇಶ್ ಮೂರ್ತಿಯವರ ಅಗಲಿಕೆ ಅವರ ಅಸಂಖ್ಯಾತ…