ಹೊಸನಗರ : ಹಲವಾರು ವರ್ಷಗಳಿಂದ ಪಟ್ಟಣದ ಚರ್ಚ್ ರಸ್ತೆಯ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಸೇವೆ ಇನ್ನು ಮುಂದೆ ತಾಲೂಕು ಕಚೇರಿಯ ಹಳೆಯ ಕಟ್ಟಡದ ಗ್ರಹರಕ್ಷಕದಳದ ಕಚೇರಿ ಮುಂಭಾಗದ ಕೊಠಡಿಯಲ್ಲಿ ಲಭ್ಯವಾಗಲಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಪ್ರಭಾವತಿ ತಿಳಿಸಿದ್ದಾರೆ.
ಸಾರ್ವಜನಿಕರು ಇನ್ನು ಮುಂದೆ ತಾಲೂಕು ಕಚೇರಿಯಲ್ಲಿ ಅಲ್ಪಸಂಖ್ಯಾತರಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅತ್ಯಾವಶ್ಯಕವಾದ ಉಪ ನೋಂದಣಾಧಿಕಾರಿಗಳ ಕಚೇರಿ ಸೇವೆ ಪಟ್ಟಣದ ಶಿವಪ್ಪನಾಯಕ ರಸ್ತೆಯ ಖಾಸಗಿ ಕಟ್ಟಡವೊಂದರಲ್ಲಿ ನಡೆಯುತ್ತಿದ್ದು ಇದರ ಸೇವೆಯನ್ನ ತಾಲೂಕು ಕಚೇರಿ ಕಟ್ಟಡದಲ್ಲಿ ಒದಗಿಸಿದಲ್ಲಿ ಹೆಚ್ಚಿನ ಎಲ್ಲಾ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಮಿನಿವಿಧಾನ ಸೌಧದಲ್ಲಿ ಲಭ್ಯ ಆಗುವುದರಿಂದ ಈ ಸೇವೆಯನ್ನು ತಾಲೂಕು ಕಚೇರಿ ಕಟ್ಟಡದಲ್ಲೇ ಪ್ರಾರಂಭಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ