POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಆಗುಂಬೆ : ಟಿವಿ ನೋಡಲು ಬಂದ ಪಕ್ಕದ ಮನೆಯ ಯುವತಿಯನ್ನು ಅತ್ಯಾಚಾರಗೈದ ವಿವಾಹಿತ : ಆರೋಪಿ ಅಂದರ್

ತೀರ್ಥಹಳ್ಳಿ : ಟಿ.ವಿ.ನೋಡಲು ಬರುತ್ತಿದ್ದ ಯುವತಿಯನ್ನ ರೇಪ್ ಮಾಡಿ ಗರ್ಭಾವತಿಯನ್ನಾಗಿ ಮಾಡಿದ  ಆರೋಪದ ಅಡಿಯಲ್ಲಿ ವ್ಯಕ್ತಿಯೋರ್ವನನ್ನು ಇಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.


ತಾಲೂಕಿನ ನಾಲೂರಿನಲ್ಲಿ ಪರಿಶಿಷ್ಟ ಜಾತಿಯ ಯುವತಿಯು 2021 ರ ಡಿಸೆಂಬರ್ ನಲ್ಲಿ ಕಾಲೇಜು ಇಲ್ಲದ ಕಾರಣ ಮನೆಯಲ್ಲೇ ಇದ್ದ ಯುವತಿ ಪಕ್ಕದ ಮನೆಯ ಮುರುಳೀಧರ್ ಭಟ್ ಎಂಬುವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದಳು.ಟಿವಿ ನೋಡುವ ವೇಳೆ ಯುವತಿಯನ್ನ ಮುರುಳೀಧರ್ ಬಲತ್ಕರಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ.


.   (ಅತ್ಯಾಚಾರದ ಆರೋಪಿ ಮುರುಳಿಧರ್ ಭಟ್)



ಇದಾದ ನಂತರ ದಾರಿಯಲ್ಲಿ ಸಿಕ್ಕಾಗಲೆಲ್ಲಾ ಮನೆಗೆ ಬಾ ಎಂದು ಕರೆಯುತ್ತಿದ್ದು ಎರಡು ಮೂರು ಬಾರಿ ಆತನ ಆಹ್ವಾನವನ್ನ ತಿರಸ್ಕರಿಸಿದ ಯುವತಿಗೆ ಮುರಳೀಧರ್ ಮನೆಗೆ ಬಾರದಿದ್ದರೆ ನಿನ್ನನ್ನೂ ಮತ್ತು ನಿನ್ನ ತಾಯಿಯನ್ನ ಜೀವಂತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದನು.


ಈ ಬೆದರಿಕೆಯ ಬೆನ್ನಲ್ಲೇ ಮನೆಗೆ ಬಂದ ಯುವತಿಯನ್ನ ಮತ್ತೆ ಬಲತ್ಕರಿಸಿರುವುದಾಗಿ ಆರೋಪಿಸಲಾಗಿದೆ. ಇದಾದ ನಂತರ ದೇಹದಲ್ಲಿ ಬದಲಾವಣೆಯಾಗಿದ್ದು ತಾಯಿ ಇದನ್ನ ಗಮನಿಸಿ ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ತೋರಿಸಿದಾಗ ಯುವತಿ 7 ತಿಂಗಳ ಗರ್ಭಾವತಿ ಎಂದು ತಿಳಿದು ಬಂದಿದೆ.


ಈಗ ಯುವತಿಯನ್ನ ಸಾಂತ್ವಾನ ಕೇಂದ್ರ ಸುರಭಿಗೆ ಕಳುಹಿಸಲಾಗಿದ್ದು ಮೊನ್ನೆ ಆ.8 ರಂದು ಬಲತ್ಕಾರ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ದೂರು ದಾಖಲಾಗಿದೆ. ಇಂದು ಬೆಳಿಗ್ಗೆ ಮುರುಳೀಧರ್ ಭಟ್ ರನ್ನ ಬಂಧಿಸಲಾಗಿದೆ. ಮುರುಳಿಧರ್ ಗೆ ಮದುವೆಯಾಗಿದ್ದರೂ ಮಕ್ಕಳಾಗಿರಲಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.