ರಿಪ್ಪನ್ ಪೇಟೆ : ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ಯುವ ಸಂಸತ್ ಚುನಾವಣೆಯನ್ನು ವಿಭಿನ್ನವಾಗಿ ರಿಪ್ಪನ್ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.
ಮತದಾನಕ್ಕೆ ಸರ್ಕಾರ ಹದಿನೆಂಟು ವಯೋಮಿತಿ ನಿಗದಿ ಪಡಿಸಿದೆ ಆದರೆ ಮೊದಲ ಮತದಾನ ಮಾಡುವಾಗ ಯುವ ಮತದಾರರಲ್ಲಿ ಆತಂಕ ದುಗುಡ ಎದ್ದುಕಾಣುತ್ತದೆ ಕೆಲವರು ಅಂಜಿಕೆಯಿಂದಲೇ ಮತದಾನದಿಂದ ಹಿಂದೆ ಜರುಗುವುದು ಹೆಚ್ಚು ಇದನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿದೆಸೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ತರಗತಿ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ವಿಶೇಷವಾಗಿ ಚಾಲನೆ ನೀಡಿದ್ದಾರೆ
ಇಲ್ಲಿ ಚುನಾವಣಾ ಆಯೋಗದ ನಿಯಮದಂತೆ ಮತದಾನ ನಡೆಯಿತು. ನಾಮಪತ್ರ ಸಲ್ಲಿಕೆ, ಹಿಂಪಡೆಯುವಿಕೆ ದಿನಾಂಕ, ಹಾಗೂ ಚಿಹ್ನೆ ವಿತರಣೆ, ಬ್ಯಾಲೆಟ್ ಮಾದರಿ, ಮುದ್ರೆ, ಬೆರಳು ಶಾಹಿ, ಗುರುತು ಪತ್ರ ಎಲ್ಲವೂ ನಿಯಮದಂತೆ ಮಾಡಲಾಯ್ತು ಇಲ್ಲಿ ಚುನಾವಣಾ ಅಧಿಕಾರಿ ಹಾಗೂ ಚುನಾವಣಾ ಸಿಬ್ಬಂದಿಗಳ ಕಾರ್ಯವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದರು,ಅಲ್ಲದೆ ಮತಪೆಟ್ಟಿಗೆಯ ಸಹ ಬಳಕೆಗೆ ಮಾಡಲಾಗಿತ್ತು ಅಭ್ಯರ್ಥಿಗಳ ಪರ ಚುನಾವಣಾ ಏಜೆಂಟರ ನೇಮಕ ಮಾಡಲಾಗಿತ್ತು.
ಈ ಕುರಿತು ಪೋಸ್ಟ್ ಮ್ಯಾನ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಹ ಶಿಕ್ಷಕ ಹಾಗೂ ಯುವ ಸಂಸತ್ ಚುನಾವಣಾ ನೋಡಲ್ ಅಧಿಕಾರಿ ಕೆ ಚಂದ್ರಪ್ಪ ಪ್ರತಿ ತರಗತಿಯಲ್ಲಿ ಕನ್ನಡ ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಮಾದರಿಯಂತೆ ಸಭಾಪತಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರು ಹಾಗೂ ಮಂತ್ರಿ ಮಂಡಲದ ರಚನೆ ನಡೆಯಲಿದೆ.
ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ತಾಲ್ಲೂಕು ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೂ ತಮ್ಮ ಕಾರ್ಯಕ್ಷೇತ್ರದ ಅರಿವು ಮೂಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ,ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ವಿಧಾನಸಭಾ ಕಲಾಪವು ನೇರವಾಗಿ ವೀಕ್ಷಣೆ ಮಾಡುವ ಅವಕಾಶವಿದೆ ಜನಪ್ರತಿನಿಧಿಗಳ ಪಾತ್ರ ಅವರನ್ನು ನಾಯಕನನ್ನಾಗಿ ಬೆಳೆಸುವ ಗುಣ ಹಕ್ಕು ಬಾಧ್ಯತೆಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಎಲ್ಲಾ ಮಕ್ಕಳು ಪ್ರಚಾರದಲ್ಲಿ ಭಾಗಿಯಾಗಿದ್ದು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿರುವುದು ಗುರುತಿನ ಚೀಟಿ ಹಿಡಿದು ಮತದಾನಕ್ಕೆ ಪಾಲ್ಗೊಂಡಿರುವುದು ವಿಶೇಷವಾಗಿ ಕಂಡಿದ್ದಂತೂ ನಿಜ……
ಶಾಲಾ ಯುವ ಸಂಸತ್ ಚುನಾವಣೆಯ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇